ಕಾರ್ಕಳ: ತಾಲ್ಲೂಕಿನ ನಂದಳಿಕೆ ಅಬ್ಬನಡ್ಕ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ವಿಶ್ವ ಕಲಾ ದಿನಾಚರಣೆ ಅಂಗವಾಗಿ ಕಲಾವಿದರನ್ನು ಗೌರವಿಸುವ ಕಾರ್ಯಕ್ರಮ ನಡೆಯಿತು.

ನಂದಳಿಕೆ ಗ್ರಾಮದ ಅಬ್ಬನಡ್ಕ ಪರಿಸರದಲ್ಲಿ ಡೋಲು ವಾದಕರಾಗಿ, ತೆಂಬರೆ, ಕೊಳಲು ವಾದಕರಾಗಿ ಗುರುತಿಸಿಕೊಂಡಿರುವ ವಸಂತ –ಯಮುನಾ ದಂಪತಿಯನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಸಾಹಿತಿ ಪಾಂಗಾಳ ಬಾಬು ಕೊರಗ ಮಾತನಾಡಿ ,ಡೋಲು ತುಳುನಾಡಿನ ಹಬ್ಬ, ಜಾತ್ರೆ, ನೇಮೋತ್ಸವ, ಕಂಬಳ ಎಲ್ಲದರ ಹೃದಯ ಬಡಿತ. ಡೋಲಿನ ಶಬ್ದವೇ ಜನರಲ್ಲಿ ಭಕ್ತಿಯ ಅಲೆಗಳನ್ನೆಬ್ಬಿಸುತ್ತದೆ. ಡೋಲು ಕೇವಲ ವಾದ್ಯವಲ್ಲ, ಬದಲಾಗಿ ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿದೆ ಎಂದರು.

ನಂದಳಿಕೆ ಫ್ರೆಂಡ್ಸ್ ಕ್ಲಬ್ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ, ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಉದ್ಯಮಿ ಇನ್ನಾ ಪ್ರೇಮ್ ಕುಲಾಲ್, ಉಪನ್ಯಾಸಕ ವೀಣೇಶ್ ಅಮೀನ್, ಫ್ರೆಂಡ್ಸ್ ಕ್ಲಬ್ನ ಬೀರೊಟ್ಟು ದಿನೇಶ್ ಪೂಜಾರಿ, ಆನಂದ ಪೂಜಾರಿ, ಸದಸ್ಯ ಯಶವಂತ್ ಕುಲಾಲ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-28-1528332228

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.