ಕೊಪ್ಪಳ: ಚಿತ್ರಕಲಾಕೃತಿಗಳ ರಚನೆ, ವ್ಯಂಗ್ಯಚಿತ್ರ ರಚನೆ, ಕವನ, ಚುಟುಕು ಬರೆಯುವುದು ಹಾಗೂ ಸಂಘಟನೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಕೊಪ್ಪಳದ ತಿರುಪತಿ ಶಿವನಗುತ್ತಿ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ 2024–25ನೇ ಸಾಲಿನ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಒಳಗೊಂಡಿದೆ.

ಕಾರ್ಯಕ್ರಮಗಳ ನಿರೂಪಣೆ, ಲೇಖನ ಬರವಣಿಗೆ, ಕಥೆ ಬರೆಯುವುದು, ಜಾನಪದ ಗಾಯನ, ಮಿಮಿಕ್ರಿ, ಹಾಸ್ಯ ಚಟಾಕಿ ಸೇರಿದಂತೆ ಅನೇಕ ಕೌಶಲಗಳಿವೆ. ಇಳಕಲ್ನಲ್ಲಿ ವಿಜಯ ಚಿತ್ರಕಲಾ ಮಹಾವಿದ್ಯಾಲಯ, ಜೇಸಿ ಪ್ರೌಢಶಾಲೆ, ಬಾದಾಮಿಯಲ್ಲಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆ, ಜಂಬಲದಿನ್ನಿಯಲ್ಲಿ ಸರ್ಕಾರಿ ಪ್ರೌಢಶಾಲೆ ಹೀಗೆ ವಿವಿಧೆಡೆ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಕುಷ್ಟಗಿ ತಾಲ್ಲೂಕಿನ ಕಬ್ಬರಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದಾರೆ.

ಬೆಳಗಾವಿಯಲ್ಲಿ ನಡೆದ ಜನಪರ ಉತ್ಸವ, ಮೈಸೂರು ದಸರಾ ವಸ್ತು ಪ್ರದರ್ಶನ, ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರನ್ನ ವೈಭವ ಉತ್ಸವ, ಹುನಗುಂದದಲ್ಲಿ ನಡೆದ ತುಷಾರೋತ್ಸವ ಕಾರ್ಯಕ್ರಮ, ಬಾಗಲಕೋಟೆಯಲ್ಲಿ ನಡೆದ 6ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧೆಡೆ ತಮ್ಮ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ.

ಕೊಪ್ಪಳದ ಗವಿಮಠ, ಧಾರವಾಡದ ಗಣಕರಂಗ, ಜಂಬಲದಿನ್ನಿ ಬಿ.ಆರ್. ಅಂಬೇಡ್ಕರ್ ಸೇವಾ ಸಮಿತಿಯ ಗೌರವ ಸನ್ಮಾನ, ಧಾರವಾಢದ ‘ಆರೂಢ ಜ್ಯೋತಿ’ ಚುಟುಕು ಕಾವ್ಯ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಲಭಿಸಿವೆ. ಅಕ್ಕಿಯಿಂದಲೇ ಅಂಬೇಡ್ಕರ್ ಅವರ ಭಾವಚಿತ್ರ ರಚನೆ, ಒಂದು ಲಕ್ಷಕ್ಕೂ ಅಧಿಕ ’ಅಂಬೇಡ್ಕರ್’ ನಾಮ ಬರವಣಿಗೆಯಲ್ಲಿ ರಚಿಸಲಾದ ಅಂಬೇಡ್ಕರ್ ಅವರ ಭಾವಚಿತ್ರ ಅವರ ವಿಶೇಷ ಸಾಧನೆಗಳಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-35-2081044183

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.