ಮಂಡ್ಯ: ‘ಎಚ್ಚರಿಸಿ ತಿದ್ದಿ ದಾರಿ ತೋರಿಸುವ ಕವಿಯ ಆಲೋಚನೆಯಲ್ಲಿ ಕವಿತೆ ಸೋಲಬಹುದು ಅಥವಾ ಜನರನ್ನು ಮುಟ್ಟದೆ ಇರಬಹುದು ನಿಜ, ಆದರೆ ಕವಿತೆ ಬರೆಯುವುದನ್ನು ನಿಲ್ಲಿಸುವುದಿಲ್ಲ. ಮತ್ತೆಮತ್ತೆ ಬರೆಯುತ್ತಲೇ ಇರುತ್ತೇನೆ ಎನ್ನುವ ಕವಿ ಆಶಯ ಮೆಚ್ಚಲೇಬೇಕಿದೆ’ ಎಂದು ವಿಶ್ರಾಂತ ಪ್ರಾಂಶುಪಾಲರಾದ ಲೀಲಾ ಅಪ್ಪಾಜಿ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘ, ಪ್ರಸಾರ ಭಾರತಿ ಭಾರತೀಯ ಸಾರ್ವಜನಿಕ ಪ್ರಸಾರ ಸೇವೆ ಆಕಾಶವಾಣಿ(ಮೈಸೂರು) ಸಹಯೋಗ ದಲ್ಲಿ ಗುರುವಾರ ನಗರದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ‘ಮುಂಗಾರು ಮಳೆ–ಇಳೆ ಕಾವ್ಯಧಾರೆ ಮತ್ತು ಬಾನುಲಿ ಬರವಣಿಗೆ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಿಜ ಜಗತ್ತು ಬೆಳಕಿನ ವೇಗದಲ್ಲಿ ಬದಲಾಗುತ್ತಿದ್ದು, ಅದರ ನಡುವೆ ಇದ್ದು ಕವಿತೆಗಳು ವ್ಯವಹರಿಸಬೇಕಿದ್ದು, ನದಿಯಾಗುವ, ಹಕ್ಕಿಯಾಗುವ ಆಸೆ ಕವಿತೆಗೂ ಇರುತ್ತದೆ. ಏಕೆಂದರೆ, ಹಕ್ಕಿ ತನ್ನಿಷ್ಟಕ್ಕೆ ಹಾರುತ್ತದೆ, ನದಿಯೂ ತನ್ನಿಷ್ಟಕ್ಕೆ ತಾನೆ ಹರಿಯುತ್ತದೆ. ಇದರ ಜೊತೆಗೆ ಕವಿತೆ ಹೊರ ಬಂದಾಗಲೇ ಕವಿ ಕಂಡ ಅನುಭವಕ್ಕಿಂತ ವಿಶಿಷ್ಟವಾಗಿರುತ್ತದೆ. ರೆಕ್ಕೆ ಬಲಿತ ಹಕ್ಕಿಯು ಹಾರಬೇಕು ನಿಜ ಆದರೆ, ಕಾವ್ಯದ ಹಕ್ಕಿಯೂ ತನ್ನ ರೆಕ್ಕೆಯನ್ನು ಸ್ವಜನೆಯಾದ ಬಾನಂಗಳದಲ್ಲಿ ಹಾರುತ್ತಿರಲು ಬಯಸುತ್ತದೆ’ ಎಂದು ವಿಶ್ಲೇಷಿಸಿದರು.

‘ಮಳೆ ಹಾಗೂ ಇತರೆ ಯಾವುದೇ ವಿಚಾರಗಳನ್ನಿಟ್ಟುಕೊಂಡು ಬರೆಯುವ ಕುವೆಂಪು, ಚನ್ನವೀರಕಣವಿ, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ, ಎಂ.ಆರ್.ಕಮಲಾ, ಸವಿತಾ ನಾಗಭೂಷಣ್, ರಾಜೇಂದ್ರ ಪ್ರಸಾದ್ ಸೇರಿದಂತೆ ಹಲವು ಕವಿಗಳು ಅವರ ವಿಚಾರಗಳಿಗೆ ಅನುಗುಣವಾಗಿ ಅನು ಭವಿಸಿ ರಚಿಸುವುದೇ ಒಂದು ಪ್ರಮುಖ ವಿಚಾರ ವಿನಿಮಯ ಎನಿಸುತ್ತದೆ. ಒಟ್ಟಾರೆ ಕವಿತೆಯನ್ನು ಆನಂದಿಸಿ ಅನುಭವಿಸಿ ಮುಂದೆ ಸಾಗೋಣ’ ಎಂದು ತಿಳಿಸಿದರು.

ಮೈಸೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ಸಹಾಯಕ ನಿರ್ದೇಶಕ ಮಂಜುನಾಥ್ ಎನ್.ಬೇದ್ರೆ ಮಾತನಾಡಿದರು. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಯಲ್ಲಿ ಆಗಮಿಸಿದ್ದ ಕವಿಗಳು ಕವಿತೆ ವಾಚಿಸಿದರು. ಜಿ.ಶಾಂತಕುಮಾರ್(ಬಾನುಲಿ ನಾಟಕಗಳು), ಬಿ.ದಿಗ್ವಿಜಯ್(ವಿಶೇಷ ರೂಪಕ ಮತ್ತು ಸಾಕ್ಷ್ಯಚಿತ್ರ) ಮತ್ತು ಮೈಸೂರು ಉಮೇಶ್ ಅವರು ‘ಚಿಂತನ ಮತ್ತು ಭಾಷಣಗಳು’ ಎಂಬ ವಿಷಯ ಕುರಿತು ಬಾನುಲಿ ಬರವಣಿಗೆ–ಕಾರ್ಯಾಗಾರ ನಡೆಸಿಕೊಟ್ಟರು. ಲೇಖಕಿ ಭವಾನಿ ಲೋಕೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-40-149983622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.