ಮಂಗಳೂರು: ಅಶಕ್ತ ಕಲಾವಿದರಿಗೆ ನೆರವು, 4 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನ, ಯಕ್ಷಗಾನ, ನಾಟಕ, ದೈವರಾಧನೆ, ಕಂಬಳ ಕಲಾವಿದರಿಗೆ ವಿಮೆ ನೋಂದಣಿ, ಚೆಂಡೆ, ಮದ್ದಳೆಯ ನಾದ, ಅಬ್ಬರತಾಳ, ಯಕ್ಷಹಾಸ್ಯ ವೈಭವ ಹೀಗೆ ವೈವಿಧ್ಯ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ನ 11ನೇ ವರ್ಷದ ‘ಪಟ್ಲ ಸಂಭ್ರಮ 2026’ ಭಿನ್ನವಾಗಿ ಮೂಡಿಬಂತು.

ಅಡ್ಯಾರ್ನ ಅಡ್ಯಾರ್ ಗಾರ್ಡನ್ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರಿಗೆ ‘ಮಹಾಪೋಷಕ ಪ್ರಶಸ್ತಿ–2026’ ಹಾಗೂ ಯಕ್ಷ ಕಲಾವಿದ ಪೊಲ್ಯ ಲಕ್ಷ್ಮಿನಾರಾಯಣ ಶೆಟ್ಟಿ ಅವರಿಗೆ ‘ಪಟ್ಲ ಪ್ರಶಸ್ತಿ–2026’ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಶಶಿಧರ ಬಿ. ಶೆಟ್ಟಿ ಬರೋಡ, ‘ಸಂಸ್ಥೆಗಳು ಬೆಳೆಯುವಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿದೆ. ಹಣವಂತರಲ್ಲಿ ಉದಾತ್ತ ಮನೋಭಾವ ಇದ್ದರೆ, ಸಂಸ್ಥೆ ಕಟ್ಟಿ ಬೆಳೆಸುವುದು ಕಷ್ಟವಾಗಲಾರದು. ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ, ಕಲಾವಿದರೂ ಉನ್ನತ ಮಟ್ಟಕ್ಕೆ ಬೆಳೆಯಬೇಕು. ಕಾಲಮಿತಿಯ ಯಕ್ಷಗಾನದಿಂದಾಗಿ ಕಲಾವಿದರಿಗೆ ಅನ್ಯ ಉದ್ಯೋಗದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಜನ ಸೇವೆ ಮಾಡುವ ಮೂಲಕ ಪಟ್ಲ ಫೌಂಡೇಶನ್ ಮಾಧವನ ಸೇವೆಯನ್ನು ಅಕ್ಷರಶಃ ಸಾಕಾರಗೊಳಿಸಿದೆ. ಯಕ್ಷಗಾನ ಮನಸ್ಸನ್ನು ಸ್ಪರ್ಶಿಸುವ ರಮ್ಯ ಕಲೆ ಯಾಗಿದ್ದು, ಯಕ್ಷ ಪಠ್ಯವು ಆದರ್ಶ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಭಗೀರಥ ಶ್ರಮವಹಿಸಿ ಗಂಗೆಯನ್ನು ಭೂಮಿಗೆ ತಂದಂತೆ, ಭಾಗವತ ಸತೀಶ್ ಪಟ್ಲ ಅವರು ಎಲ್ಲ ದಾನಿಗಳನ್ನು ಒಗ್ಗೂಡಿಸಿ, ಸೇವಾಗಂಗೆಯನ್ನು ಯಕ್ಷಲೋಕಕ್ಕೆ ತಂದ ಯಕ್ಷ ಭಗೀರಥ. ಯಾವುದೇ ಪ್ರತಿಫಲ ಬಯಸದೆ ಪಟ್ಲ ಟ್ರಸ್ಟ್ ಅಗತ್ಯವುಳ್ಳವರಿಗೆ ನೆರವಾಗುತ್ತಿದ್ದು, ನೆರವು ಪಡೆದ ಫಲಾನುಭವಿಗಳು ಸಮಾಜಕ್ಕೆ ಯಾವ ರೀತಿಯಲ್ಲಿ ಋಣ ತೀರಿಸಬೇಕು ಎಂಬ ಬಗ್ಗೆ ಯೋಚಿಸಬೇಕಾಗಿದೆ ಎಂದರು.

ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಅಧ್ಯಕ್ಷತೆ ವಹಿಸಿದ್ದರು. ಪ್ರೊ ಎಂ.ಎಲ್. ಸಾಮಗ, ಮುಂಬೈ ವಿ.ಕೆ ಗ್ರೂಪ್ಸ್ ಅಧ್ಯಕ್ಷ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಉದ್ಯಮಿ ವೇಣುಗೋಪಾಲ್ ಶೆಟ್ಟಿ ಮುಂಬೈ, ಅಜಿತ್ ಶೆಟ್ಟಿ ಅಂಕಿಲೇಶ್ವರ, ದಿವಾಕರ ರಾವ್ ಕಟೀಲು, ಉದ್ಯಮಿ ಜಿ. ಶಂಕರ್ ಉಡುಪಿ, ಪಟ್ಲಗುತ್ತು ಮಹಾಬಲ ಶೆಟ್ಟಿ, ಪುರುಷೋತ್ತಮ ಕೆ ಭಂಡಾರಿ ಅಡ್ಯಾರ್, ಸುದೇಶ್ ಕುಮಾರ್ ರೈ, ಸತೀಶ್ ಭಂಡಾರಿ, ಅಶೋಕ್ ಆರ್ ಶೆಟ್ಟಿ ಪೆರ್ಮುದೆ, ದುರ್ಗಾಪ್ರಸಾದ್ ಪಿವಿ ಪಡುಬಿದ್ರಿ, ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಜರಾಜೀವ ಪೂಜಾರಿ ಕೈಕಂಬ, ರವಿಚಂದ್ರ ಶೆಟ್ಟಿ ಅಶೋಕನಗರ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಸ್ವಾಗತಿಸಿದರು. ಪ್ರದೀಪ್ ಆಳ್ವ ಕದ್ರಿ ವಂದಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-29-1078608083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.