ಉಡುಪಿ: ‘ಯಕ್ಷಗಾನಕ್ಕೆ ಪ್ರಯೋಜನವಾಗುವ ಸಂಶೋಧನೆಗಳು ನಡೆಯ ಬೇಕು. ಯಾರನ್ನೋ ಮೆಚ್ಚಿಸಲು ಸಂಶೋಧನೆ ಗಳು ನಡೆಯಬಾರದು. ಬಣ್ಣದ ವೇಷದ ಬಗ್ಗೆ ಇದುವರೆಗೆ ಸಂಶೋಧನೆ ಆಗಿಲ್ಲ. ಅದು ನಡೆಯಬೇಕು’ ಎಂದು ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.

ಹುಕ್ಲಮಕ್ಕಿ ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ ಶತಮಾನೋತ್ಸವ ಸಂಭ್ರಮಾಚರಣೆ ಪ್ರಯುಕ್ತ ನಗರದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಿ ಲೋಕಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಡಗುತಿಟ್ಟಿನಲ್ಲಿ ಬಣ್ಣದ ವೇಷ ಪುನರುಜ್ಜೀವನಗೊಳ್ಳಬೇಕಾದ ಅಗತ್ಯ ವಿದೆ. ತೆಂಕು ತಿಟ್ಟಿನಲ್ಲಷ್ಟೇ ಬಣ್ಣದ ವೇಷ ಉಳಿದುಕೊಂಡಿದೆ. ಯಕ್ಷಗಾನದ ಇತಿಹಾಸದ ದಾಖಲೆಗಳನ್ನು ವಿಸ್ತರಿಸುವ ಕಾರ್ಯ ಈಗ ನಡೆಯುತ್ತಿದೆ. ಯಕ್ಷಗಾನ ಸಮ್ಮೇಳನ ಕೂಡ ನಡೆಯಬೇಕು’ ಎಂದು ಹೇಳಿದರು.

ಸಂಶೋಧಕ ಜಿ.ಎಲ್. ಹೆಗಡೆ ಮಾತನಾಡಿ, ‘ಹಿಂದೆ ಪ್ರತಿ ಊರಲ್ಲೂ ಮೇಳಗಳಿದ್ದವು. ಮೊಬೈಲ್, ಟಿ.ವಿ.ಪ್ರಭಾವವಿಲ್ಲದ ಕಾಲದಲ್ಲಿ ಸಾಕಷ್ಟು ಆಟಗಳು ನಡೆಯುತ್ತಿದ್ದವು. ಇಂದು ಅದು ಕಡಿಮೆಯಾಗಿದೆ’ ಎಂದರು.

‘ಯಕ್ಷಗಾನವೆಂದರೆ ತಪಸ್ಸು, ಆರಾಧನೆ. ಭಾರತೀಯ ಮೌಲ್ಯಗಳನ್ನು ಪ್ರಸಾರ ಮಾಡುವ ಈ ಕಲೆಯು ಕನ್ನಡ ಸಂಸ್ಕೃತಿಯನ್ನೂ ಬೆಳೆಸಿಕೊಂಡು ಬಂದಿದೆ. ಹುಕ್ಲಮಕ್ಕಿ ಮೇಳವು ಅನೇಕ ಕಲಾವಿದರನ್ನು ಸೃಷ್ಟಿಸಿದೆ’ ಎಂದು ಹೇಳಿದರು.

‘ಯಕ್ಷಗಾನ ಕಲಾವಿದರು ಬಣ್ಣ ಹಾಕುತ್ತಾರೆ. ಆಮೇಲೆ ಮುಖ ಒರೆಸಿಕೊಂಡು ಹೋಗುತ್ತಾರೆ. ಯಾವುದನ್ನೂ ದಾಖಲಾತಿ ಮಾಡಿಕೊಳ್ಳುವುದಿಲ್ಲ. ಯಕ್ಷಗಾನ ಅಕಾಡೆಮಿಯು ಯಕ್ಷಗಾನಕ್ಕೆ ಸಂಬಂಧಪಟ್ಟ ಕೃತಿಗಳನ್ನು ಹೊರತರುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಇಂದು ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್ಗಳಲ್ಲಿ ಬರುವ ಎರಡು ನಿಮಿಷಗಳ ವಿಡಿಯೊ ಗಳಿಗೆ ಜನರು ಮಾರು ಹೋಗುತ್ತಿದ್ದಾರೆ. ಅದು ಯಕ್ಷಗಾನಕ್ಕೂ ಕುತ್ತು ತರುತ್ತಿದೆ. ಯಕ್ಷಗಾನ ಕಲಾವಿದರು ಕೂಡ ಅಧ್ಯಯನಶೀಲರಾಗಬೇಕು’ ಎಂದು ಹೇಳಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್, ಅಧ್ಯಕ್ಷ ಎಂ.ಗಂಗಾಧರ ರಾವ್, ನಾರಾಯಣ ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಎಲ್. ಸಾಮಗ, ಯಕ್ಷಗಾನ ಅರ್ಥಧಾರಿ ಎಂ.ಪ್ರಭಾಕರ ಜೋಶಿ, ಸಂಶೋಧಕ ಜಿ.ಎಲ್. ಹೆಗಡೆ, ಯಕ್ಷಗಾನ ಪ್ರಸಂಗಕರ್ತ ಡಿ.ಎಸ್. ಶ್ರೀಧರ ಹಾಗೂ ಯಕ್ಷಗಾನ ಕಲಾರಂಗ ಸಂಸ್ಥೆಗೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರು ರಚಿಸಿದ ಯಕ್ಷಗಾನ ಅರ್ಥಸಹಿತ ‘ಅಂಗದ ಸಂಧಾನ’ ಕೃತಿಯ ಮರುಮುದ್ರಣ ಗೊಂಡ ಪುಸ್ತಕ ಲೋಕಾರ್ಪಣೆಗೊಂಡಿತು.

ಶ್ರೀಪಾದ ಹೆಗಡೆ ಸ್ವಾಗತಿಸಿದರು. ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿದರು. ಪ್ರಸನ್ನ ಹೆಗಡೆ ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-28-676785476

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.