ವಡಗೇರಾ: ‘ಕಲೆ ಹಾಗೂ ಕಲಾವಿ ದರಿಂದ ಭಾರತದ ಸಂಸ್ಕೃತಿಯು ಇಂದಿಗೂ ಜೀವಂತವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಕಲೆ ಹಾಗೂ ಕಲಾವಿದರನ್ನು ಗೌರವಿಸಬೇಕು’ ಎಂದು ಮಾಳಪ್ಪ ಪೂಜಾರಿ ಹೇಳಿದರು.

ತಾಲ್ಲೂಕಿನ ತಡಿಬಿಡಿ ಗ್ರಾಮದ ಅಂಬಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ಶಹಾಪುರ ತಾಲ್ಲೂಕಿನ ಶಾರದಳ್ಳಿಯ ಶ್ರೀ ಮಾರುತೇಶ್ವರ ನಾಟ್ಯ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪೌರಾಣಿಕ ನಾಟಕ ಹಾಗೂ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ಆಧುನಿಕ ಯುಗದ ಜೀವನ ಶೈಲಿಗೆ ಕಲಾವಿದರು ಮಾಯವಾಗಿ ಎಲೆಮರೆ ಕಾಯಿಯಂತೆ ಜೀವನ ನಡೆಸುತಿದ್ದಾರೆ. ಇದು ಹೀಗೆಯ ಮುಂದುವರೆದರೆ ಮುಂಬ ರುವ ದಿನಗಳಲ್ಲಿ ಕಲಾವಿದರು ಮರೆಯಾಗುತ್ತಾರೆ. ಕಲಾವಿದರನ್ನು ಉಳಿಸಬೇಕಾದರೆ ಅವರ ಕಲೆಗೆ ಸಮುದಾಯವು ಪ್ರೋತ್ಸಾಹ ನೀಡಬೇಕು’ ಎಂದು ತಿಳಿಸಿದರು.

ನಂತರ ಪುರಾಣಿಕರಾದ ಮಹಾಂ ತೇಶ, ಕಲಾವಿದ ವೀರೇಶ ಗವಾಯಿ ಯಡ್ರಾಮಿ, ಸುರೇಶ ಶಹಾಪುರ, ಸಿದ್ದನಗೌಡ, ಜೇಜಮ್ಮ, ಬಾಲಾಜಿ, ರವಿ, ದಿಲೀಪ್ ಶಾರದಳ್ಳಿ, ಬಸವರಡ್ಡಿ ಶಾರದಳ್ಳಿ ಪೌರಾಣಿಕ ಹಾಗೂ ಸಂಗೀತ ಕಾರ್ಯಕ್ರಮ ನೀಡಿದರು.

ಸಂಘದ ಅಧ್ಯಕ್ಷ ದೊಡ್ಡ ನಾಗೇಶ ಶಾರದಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಹಾಂತಗೌಡ ಮಾಲಿಪಾಟೀಲ, ಮಹೇಶ ವಿಶ್ವಕರ್ಮ, ಮರೆಪ್ಪ ಕ್ರಾಂತಿ, ಶರಣಪ್ಪ ಹಳ್ಳಿ, ತಿಪ್ಪಣ್ಣ ಲಂಡನಕರ್, ರಂಗಪ್ಪ ದಳಪತಿ, ಭೀಮಶಾ, ಹೀರಾ ರಾಯಪ್ಪ ಗುಂಡಳ್ಳಿ, ತಬಲಾ ಸಾಥಿ ಶೇಖರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಕಲಾವಿದರ ಸಂಘದ ಕಾರ್ಯದರ್ಶಿ ಜಯಮ್ಮ ನಿರೂಪಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-30-320019061

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.