‘ಗೋಲ್ಡನ್ ಬ್ರಿಡ್ಜ್’ ಮೇಲೆ ಕಾಲಿಟ್ಟಾಗ...

7

‘ಗೋಲ್ಡನ್ ಬ್ರಿಡ್ಜ್’ ಮೇಲೆ ಕಾಲಿಟ್ಟಾಗ...

Published:
Updated:
Deccan Herald

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿಯೆಟ್ನಾಂನ ‘ಬಂಗಾರದ ಸೇತುವೆ’ (ಗೋಲ್ಡನ್‌ ಬ್ರಿಡ್ಜ್) ದೇಶದ ಪ್ರವಾಸೋದ್ಯಮದ ದಿಕ್ಕನ್ನೇ ಬದಲಿಸಿದೆ. ಈ ನಿರ್ಮಾಣದಿಂದಾಗಿ ವಿಶ್ವದಲ್ಲೇ ಅತ್ಯಂತ ವೇಗವಾಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿರುವ ದೇಶ ಎಂಬ ಹೆಗ್ಗಳಿಕೆಗೂ ವಿಯೆಟ್ನಾಂ ಪಾತ್ರವಾಗಿದೆ.

ಇದು ಊರಿಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲ.  ನಿಸರ್ಗ ಸೌಂದರ್ಯವನ್ನು ಸವಿಯುವ ಉದ್ದೇಶಕ್ಕಾಗಿ ಮಾತ್ರ ಈ ಸೇತುವೆ ನಿರ್ಮಿಸಿರುವುದು ವಿಶೇಷ. ಸೇತುವೆಯ ಎರಡೂ ದಿಕ್ಕುಗಳಲ್ಲಿ ಹಚ್ಚ ಹಸಿರಿನ ಬೆಟ್ಟಗಳು, ಕೆಳಭಾಗದಲ್ಲಿ ಮೈ ಝುಮ್ಮೆನ್ನಿಸುವ ಕಣಿವೆ, ಸ್ವಚ್ಛ ಗಾಳಿ, ಮುಗಿಲೇ ಕೈಗೆ ತಾಕಿದಂತೆ... ಈ ಸೇತುವೆಯ ಮೇಲೆ ನಡೆದು ಹೋಗುತ್ತಿದ್ದರೆ ಸ್ವರ್ಗ ಸುಖವೇ ಸರಿ. ಪ್ರವಾಸಿಗರ ಪಾಲಿಗೆ ನಿಸರ್ಗದ ರಮಣೀಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೇ ಸೊಗಸಾದ ಅನುಭವ. 

ಡಾ–ನಾಂಗ್‌ನ ಹೊರಭಾಗದಲ್ಲಿ ಬಾಲ್‌ ಪರ್ವತದ ನಡುವೆ ಇರುವ ಈ ಸೇತುವೆ ವಿಶ್ವದ ಅತ್ಯದ್ಭುತ ಸೇತುವೆಗಳಲ್ಲೊಂದು. ಈ ಸೇತುವೆಯನ್ನು ಬೃಹತ್‌ ಕಲ್ಲಿನ ಎರಡು ಕೈಗಳು ಎತ್ತಿ ಹಿಡಿದಂತೆ ವಿನ್ಯಾಸಗೊಳಿಸಲಾಗಿದೆ.  

‘ಕಲ್ಲಿನಿಂದ ಕೊರೆದು ಮಾಡಿರುವ ವಿನ್ಯಾಸದಂತೆ ಕಾಣುವ ಈ ಕೈಗಳ ಅಸ್ಥಿಪಂಜರವನ್ನು ಉಕ್ಕಿನ ಮೆಷ್‌ಗಳಿಂದ ನಿರ್ಮಾಣ ಮಾಡಲಾಗಿದೆ. ನಂತರ ಫೈಬರ್‌ ಗ್ಲಾಸ್‌ನಿಂದ ಅಂತಿಮ ಸ್ಪರ್ಶ ನೀಡಲಾಗಿದೆ. ಒಂದು ವರ್ಷದಲ್ಲಿ ಸೇತುವೆ ಪೂರ್ಣಗೊಂಡಿದೆ’ ಎಂದು ಸೇತುವೆ ನಿರ್ಮಾಣ ಮಾಡಿರುವ ಟಿ.ಎ. ಲ್ಯಾಂಡ್‌ಸ್ಕೇಪಿಂಗ್‌ ಆರ್ಕಿಟೆಕ್ಟ್‌ ಸಂಸ್ಥೆಯ ಪ್ರತಿನಿಧಿ  ಬೋರ್ಡ್‌ ಪಂಡ ತಿಳಿಸಿದ್ದಾರೆ. 

ವಿಯೆಟ್ನಾಂಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ವಿಭಿನ್ನ ಮಾದರಿಯಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. 2018ರ ಮೊದಲ ಎರಡು ತಿಂಗಳಲ್ಲಿ 2.86 ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರವಾಸಿಗರ ಸಂಖ್ಯೆ 2017ಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಪ್ರವಾಸೋದ್ಯಮದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಜಗತ್ತಿನ ಹತ್ತು ರಾಷ್ಟ್ರಗಳ ಪಟ್ಟಿಯಲ್ಲಿ ವಿಯೆಟ್ನಾಂ ಸ್ಥಾನ ಪಡೆದಿದೆ ಎಂದು ಯುನೈಟೆಡ್‌ ನ್ಯಾಷನಲ್ಸ್‌ ವರ್ಲ್ಡ್‌ ಟೂರಿಸಂ ಆರ್ಗನೈಟೇಷನ್‌ ವರದಿ ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !