ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಕೈಗೊಳ್ಳಬೇಕು, ವಿಶ್ವನಾಥನ ಕೃಪೆಗೆ ಪಾತ್ರರಾಗಬೇಕು ಎನ್ನುವುದು ಪ್ರತಿಯೊಬ್ಬ ಹಿಂದೂವಿನ ಕನಸು. ಮನೆಯ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಮುಗಿಸಿ ದಂಪತಿ ಸಮೇತ ಕಾಶಿ ಯಾತ್ರೆ ಕೈಗೊಂಡರೆ ಮಾನವ ಜನ್ಮ ಸಾರ್ಥಕ ಎನ್ನುವ ನಂಬಿಕೆಯೂ ಹಲವರದ್ದು.

‘ಹಿಂದೆಲ್ಲಾ ಕಾಶಿಗೆ ನಡೆದೇ ಸಾಗಬೇಕಿತ್ತು. ಅನೇಕರು ಅಲ್ಲೇ ಜೀವನದ ಕೊನೆಯ ಗಳಿಗೆಯನ್ನು ಕಳೆಯುತ್ತಿದ್ದರು’ ಎಂದೆಲ್ಲಾ ನಮ್ಮ ಅಜ್ಜಿ, ತಾತಂದಿರು ಹೇಳಿರುವುದನ್ನು ಕೇಳಿರುತ್ತೇವೆ. ಆದರೆ ಈಗ ಕಾಲ ಬದಲಾಗಿದೆ. ಸಾರಿಗೆ ವ್ಯವಸ್ಥೆ ಸುಧಾರಿಸಿದೆ. ರೈಲು, ವಿಮಾನಗಳು ಗಂಟೆಗಳಲ್ಲಿ ತಲುಪಬೇಕಾದ ಸ್ಥಳ ಸೇರುವಂತೆ ಮಾಡುತ್ತವೆ. ಕಾಶಿ ಯಾತ್ರೆಯೂ ಈಗ ಸುಲಭವಾಗಿದೆ.
.IRCTC ದುಬೈ ಟೂರ್ ಪ್ಯಾಕೇಜ್: ಹಣ ಎಷ್ಟು,ಎಲ್ಲಿಂದ ಪ್ರವಾಸ ಆರಂಭ? ಇಲ್ಲಿದೆ ಮಾಹಿತಿ.
ಭಾರತೀಯ ರೈಲ್ವೆಯ ಐಆರ್ಸಿಟಿಸಿ ಭಾರತದಾದ್ಯಂತ ಪ್ರಯಾಣಿಸಲು ಟೂರ್ ಪ್ಯಾಕೇಜ್ಅನ್ನು ನೀಡುತ್ತಿದೆ. ಕಾಶಿಗೆ ಪ್ರಯಾಣಿಸಲು ಕೂಡ ಐಆರ್ಸಿಟಿಸಿ ಟೂರ್ ಪ್ಯಾಕೇಜ್ ಇದೆ. ‘ಕರ್ನಾಟಕ ಭಾರತ ಗೌರವ ಕಾಶಿ ದರ್ಶನ’ ಎಂದು ಈ ಯಾತ್ರೆಗೆ ಹೆಸರನ್ನಿರಿಸಿದೆ.

ಈ ಯಾತ್ರೆಗಾಗಿಯೇ ಭಾರತ್ ಗೌರವ್ ಪ್ರವಾಸಿ ರೈಲು ನಿಯೋಜನೆಗೊಂಡಿದೆ. ಒಟ್ಟು 8 ರಾತ್ರಿ ಹಾಗೂ 9 ದಿನಗಳ ಯಾತ್ರೆ ಇದಾಗಿದೆ. ಈ ಟೂರ್ನಲ್ಲಿ ವಾರಾಣಸಿ, ಗಯಾ, ಅಯೋಧ್ಯೆ ಮತ್ತು ಪ್ರಯಾಗ್ರಾಜ್ ಸ್ಥಳಗಳನ್ನು ಒಳಗೊಂಡಿರುತ್ತದೆ.

ಈಗ ಐಆರ್ಸಿಟಿಸಿ ನೀಡಿರುವ ಮಾಹಿತಿ ಪ್ರಕಾರ, ಮಾರ್ಚ್ 9ರಂದು ರೈಲಿನಲ್ಲಿ ಟೂರ್ ಆರಂಭವಾಗುತ್ತಿದೆ. (ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಟೂರ್ಗಳ ಬಗ್ಗೆ ಮಾಹಿತಿಯನ್ನು ಪರಿಶೀಲಿಸಬಹುದು)

ಪ್ರತಿ ವ್ಯಕ್ತಿಗೆ ₹ 22,500 ದರ ನಿಗದಿಪಡಿಸಲಾಗಿದೆ. ಬೆಂಗಳೂರಿನಿಂದ ಪ್ರವಾಸ ಆರಂಭವಾಗಿ ಬೆಂಗಳೂರಿಗೆ ತಲುಪಿಸುತ್ತಾರೆ. ಟೂರ್ ಪ್ಯಾಕೇಜ್ ಬುಕ್ ಮಾಡಿದರೆ ಬೆಂಗಳೂರಿನ ಯಶವಂತಪುರ, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ ಮತ್ತು ಬೆಳಗಾವಿ ರೈಲು ನಿಲ್ದಾಣಗಳಲ್ಲಿ ರೈಲನ್ನು ಹತ್ತಿಕೊಳ್ಳಬಹುದು.

ಏನೇನು ವೀಕ್ಷಣೆ?

ವಾರಾಣಸಿಯಲ್ಲಿ ತುಳಸಿ ಮಾನಸ ದೇಗುಲ, ಸಂಕಟ ಮೋಚನ ಹನುಮಾನ್ ದೇಗುಲ, ಕಾಶಿ ವಿಶ್ವನಾಥ ದೇಗುಲ, ಗಂಗಾ ಆರತಿಯನ್ನು ನೋಡಬಹುದು.

ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯಲ್ಲಿರುವ ರಾಮಮಂದಿರಕ್ಕೆ ಭೇಟಿ ನೀಡಿ, ಬಾಲರಾಮನ ದರ್ಶನ ಪಡೆಯಬಹುದು.

ಗಯಾದಲ್ಲಿ ವಿಷ್ಣುಪಾದ ದೇಗುಲ ಮತ್ತು ಮಹಾಬೋಧಿ ದೇಗುಲವನ್ನು ವೀಕ್ಷಿಸಬಹುದು.

ಪ್ರಯಾಗ್ರಾಜ್ನಲ್ಲಿ ಹನುಮಾನ್ ದೇಗುಲ ಮತ್ತು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ, ಗಂಗಾ ನದಿ ನೀರನ್ನು ಮನೆಗೆ ಕೊಂಡೊಯ್ಯಬಹುದು.

ಈ ಪ್ರಯಾಣದಲ್ಲಿ ಬೆಳಗಿನ ಉಪಹಾರ, ಊಟ, ಉಳಿಯುವ ವ್ಯವಸ್ಥೆ, ನಗರದ ವೀಕ್ಷಣೆಗೆ ಎಸಿ ರಹಿತ ಬಸ್ ವ್ಯವಸ್ಥೆಯನ್ನೂ ಐಆರ್ಸಿಟಿಸಿ ನೋಡಿಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.