ಏಕಾಂಗಿ ಪ್ರವಾಸ ಮಾಡಿ!

7

ಏಕಾಂಗಿ ಪ್ರವಾಸ ಮಾಡಿ!

Published:
Updated:

ಕಾಂಗಿಯಾಗಿ ಪ್ರವಾಸ ಮಾಡುವಲ್ಲಿ ಎರಡು ಲಾಭಗಳಿವೆ. ಒಂದು ಏಕಾಂತ, ಇನ್ನೊಂದು ಲೋಕಾಂತ ಎರಡನ್ನೂ ಒಟ್ಟೊಟ್ಟಿಗೆ ಸಾಧಿಸಬಹುದು.

ಜನರೊಟ್ಟಿಗೆ ಬೆರೆಯಲು ಇದೊಂದು ಮಾರ್ಗವಾಗಲಿದೆ. ಏಕಾಂಗಿ ಪ್ರವಾಸ ಕೈಗೊಳ್ಳಲು ಪ್ರೇರಣೆ ನೀಡುವಂಥ ಹಲವು ಕಾರಣಗಳನ್ನಿಲ್ಲಿ ಪಟ್ಟಿ ಮಾಡಲಾಗಿದೆ.

1. ನಿಮ್ಮನ್ನು ನೀವು ಕಂಡುಕೊಳ್ಳುವಿರಿ

ಗುಂಪಿನಲ್ಲಿ, ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಪ್ರವಾಸ ಮಾಡುವಾಗ ಇನ್ನೊಬ್ಬರ ಆಯ್ಕೆ ಆದ್ಯತೆಯನ್ನು ಗಮನಿಸಿ, ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಇಲ್ಲವೇ ಬಹುಜನ ಹಿತಾಯವೆಂಬಂಥ ನಿರ್ಣಯಗಳಿಗೆ ತಲೆದೂಗಬೇಕಾಗುತ್ತದೆ. ಏಕಾಂಗಿ ಪ್ರವಾಸದಲ್ಲಿ ನಿಮ್ಮಿಷ್ಟ, ನಿಮ್ಮ ಆಯ್ಕೆಗಳು ನಿಮಗೇ ಸ್ಪಷ್ಟವಾಗುತ್ತವೆ.

2. ನೀವು ಜವಾಬ್ದಾರರಾಗಿರುತ್ತೀರಿ

ಪ್ಯಾಕಿಂಗ್‌ನಿಂದ ಆರಂಭಿಸಿ, ಟಿಕೆಟ್‌ ಜೋಪಾನವಾಗಿರಿಸುವುದು, ಪ್ರಯಾಣದ ಮಾಧ್ಯಮಗಳನ್ನು ನಿರ್ಧರಿಸುವುದು, ಅದಕ್ಕಾಗಿ ಸಮಯಕ್ಕೆ ಸರಿಯಾಗಿ ತಲುಪುವುದು ಮುಂತಾದವುಗಳನ್ನು ಯೋಜಿಸಿಕೊಳ್ಳುವಷ್ಟು, ಅವನ್ನು ಕಾರ್ಯಗತ ಮಾಡಿಕೊಳ್ಳುವಷ್ಟು ಜವಾಬ್ದಾರರಾಗಿರುತ್ತೀರಿ.

3. ಸ್ವತಂತ್ರರು

ಎಲ್ಲಿ ಹೋಗಬೇಕು, ಏನು ಮಾಡಬೇಕು, ಏನು ತಿನ್ನಬೇಕು? ಎಷ್ಟು ಸಮಯ ಕಳೆಯಬೇಕು, ಖರ್ಚು ಮಾಡಬೇಕು ಹೀಗೆ ಎಲ್ಲದಕ್ಕೂ ಸ್ವಂತ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರಾಗಿರುತ್ತೀರಿ.

4. ನಿಮ್ಮ ಆಯ್ಕೆ–ಆದ್ಯತೆ

 ಊಟ, ತಿಂಡಿ, ರಸ್ತೆ, ಮಾರ್ಗ, ಉಡುಗೆ ತೊಡುಗೆ, ಶಾಪಿಂಗ್‌, ಮೇಕಪ್‌, ಸುತ್ತಾಟ, ವಿಶ್ರಾಂತಿ, ಪ್ರವಾಸಿ ತಾಣ, ತೀರ್ಥಕ್ಷೇತ್ರ ಹೀಗೆ ಹಲವಾರು ಆಯ್ಕೆಗಳಲ್ಲಿ ನಿಮಗಿಷ್ಟವಾಗಿರುವುದನ್ನೇ ಆಯ್ಕೆ ಮಾಡಬಹುದು. ನಿಮ್ಮ ಆಸಕ್ತಿ ಹಾಗೂ ಅಭಿರುಚಿಗಳನ್ನು ಇಲ್ಲಿ ಸ್ಪಷ್ಟವಾಗಿ ಗೊತ್ತು ಮಾಡಿಕೊಳ್ಳಬಹುದು.

5. ಕಲಿಕೆ

ಪ್ರತಿ ಹಂತ, ಪ್ರತಿ ಹೆಜ್ಜೆಯಲ್ಲಿಯೂ ಹೊಸತನ್ನು ಕಲಿಯುವಿರಿ. ಉಡುಗೆ–ತೊಡುಗೆ, ಆಹಾರಕ್ರಮ, ದಿನಚರಿ ಎಲ್ಲದರಲ್ಲೂ ಶಿಸ್ತು ತಾನಾಗಿಯೇ ಮೂಡುತ್ತದೆ.

6.ಅನುಭವ

ನವ್ಯನವೀನ ಅನುಭವಗಳಿಗೆ ತೆರೆದುಕೊಳ್ಳುವಿರಿ. ಗುಂಪಿನಲ್ಲಿದ್ದಾಗ ಇನ್ನೊಬ್ಬರೊಡನೆ ಹೊಂದಿಕೊಳ್ಳುವುದರಲ್ಲಿ, ಅವರ ಇಷ್ಟಕಷ್ಟಗಳನ್ನು ಗಮನಿಸುವುದರಲ್ಲಿ ನಿಮ್ಮತನ, ನಿಮ್ಮ ಆಯ್ಕೆಗಳನ್ನೇ ಮರೆತಿರುತ್ತೀರಿ. ಏಕಾಂಗಿ ಪ್ರವಾಸದಲ್ಲಿ ಈ ತೊಡಕು ಇರುವುದಿಲ್ಲ.

7. ಆತ್ಮವಿಶ್ವಾಸಿಗಳಾಗುವಿರಿ

ಎಂಥ ಸಂದರ್ಭವನ್ನಾದರೂ, ಯಾವ ಪರಿಸ್ಥಿತಿಯನ್ನಾದರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡುತ್ತದೆ.

**

ನೆನಪಿರಲಿ...

* ಎಲ್ಲವೂ ಪೂರ್ವನಿರ್ಧಾರಿತವಾಗಿದ್ದರೆ ಒಳಿತು

* ಎಷ್ಟೇ ಏಕಾಂತವನ್ನು ಬಯಸಿದರೂ ಪ್ರತಿದಿನದ ಆಗುಹೋಗುಗಳನ್ನು ಆತ್ಮೀಯರಿಗೆ ತಿಳಿಸುತ್ತಿರಿ.

* ಕುಟುಂಬದವರೊಡನೆ ಸಂಪರ್ಕದಲ್ಲಿರಿ

* ಸಾಧ್ಯವಿದ್ದಷ್ಟು ಅಮೂಲ್ಯ ಆಭರಣಗಳನ್ನು ಮನೆಯಲ್ಲಿಯೇ ಬಿಟ್ಟು ಪ್ರವಾಸಕ್ಕೆ ಹೊರಡಿ

* ಬಟ್ಟೆ ಬರೆಗಳ ಭಾರ, ನೀವು ಹೊರುವಷ್ಟು ಮಾತ್ರವಿರಲಿ

* ನಿಮಗೆ ಅಗತ್ಯವಿರುವ ಔಷಧಿ, ಮಾತ್ರೆಗಳು ನಿಮ್ಮೊಟ್ಟಿಗೆ ಇರಲಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !