ಗುರುವಾರ , ಏಪ್ರಿಲ್ 15, 2021
26 °C

ಯೋಗ ಪ್ರವಾಸೋದ್ಯಮ ‘ಟ್ರವೊಲ್ಯೂಷನ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಚೂಣಿಯ ಪ್ರವಾಸೋದ್ಯಮ ಸೇವಾ ಸಂಸ್ಥೆ ಥಾಮಸ್ ಕುಕ್ ಇಂಡಿಯಾ, ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗವನ್ನು ಪ್ರಚುರ ಪಡಿಸಲು ಟ್ರವಲ್ಯೂಶನ್ ಎಂಬ ‘ಯೋಗ ಪ್ರವಾಸ’ವನ್ನು ಆರಂಭಿಸಿದೆ. 

ಸರ್ಕಾರಕ್ಕೆ ಬೆಂಬಲವಾಗಿ ಆರೋಗ್ಯಕರ ಹವ್ಯಾಸಗಳನ್ನು ಪ್ರಚುರಗೊಳಿಸುವ ನಿಟ್ಟಿನಲ್ಲಿ ವಿಶಿಷ್ಟ ಯೋಗ- ಆರೋಗ್ಯ ಅನುಭವಗಳ ಮೂಲಕ ಹಾಲಿಡೇಗಳನ್ನು ರೂಪಾಂತರಿಸಲು ಕಂಪನಿಯು ಯೋಜಿಸಿದೆ.

ಟ್ರವೊಲ್ಯುಶನ್ ಉತ್ಪನ್ನಗಳು ಯುವಕರು, ದಂಪತಿ, ಹಿರಿಯರು ಹಾಗೂ ಐಷಾರಾಮಿ ಸೇರಿದಂತೆ ವಿವಿಧ ಶ್ರೇಣಿಗಳನ್ನು ಒಳಗೊಂಡಿದೆ. ಊಟ, ವಸತಿ, ಸಾರಿಗೆ ಜೊತೆಗೆ ಯೋಗ ತರಬೇತಿ ಪರಿಣಿತರು ಮತ್ತು ವಿವಿಧ ರೀತಿಯ ಆರೋಗ್ಯ ಪರಿಣಿತರಾದ ಆಯುರ್ವೇದ, ಧ್ಯಾನ, ಸ್ಪಾ, ನ್ಯಾಚುರಲ್ ಥೆರಪಿಗಳು, ಸಲಹೆ ಮತ್ತು ಆರ್ಟ್ ಥೆರಪಿ ಹಾಗೂ ಸಾತ್ವಿಕ ಆಹಾರವನ್ನು ಇದರ ಅಡಿಯಲ್ಲಿ ನೀಡಲಾಗುತ್ತದೆ. ಐಸೊಲಾ ಡಿ ಕೊಕೋ ಪೂವರ್, ದಿ ಲೇಕ್ ವಿಲೇಜ್, ಕೊಟ್ಟಾಯಂ, ಕೊಚ್ಚಿಯ ಬಳಿ ಪ್ರಕೃತಿ ಶಕ್ತಿ ಇತ್ಯಾದಿ ಸ್ಥಳಗಳೂ ಇವೆ.

ಆರೋಗ್ಯ ಪ್ರವಾಸವು ಕಳೆದ ಮೂರು ವರ್ಷದಲ್ಲಿ ವರ್ಷಂ ಪ್ರತಿ ಶೇ.20ರಷ್ಟು ಏರಿಕೆಯಾಗಿದೆ ಎಂದು ಥಾಮಸ್ ಕುಕ್ ಇಂಡಿಯಾದ ಆಂತರಿಕ ಮಾಹಿತಿ ಹೇಳುತ್ತದೆ. ಡಿಟಾಕ್ಸ್ ಟ್ರಾವೆಲ್ ಮೂಲಕ ಜನರನ್ನು ಪ್ರೋತ್ಸಾಹಿಸಲು ಕಂಪನಿ ನಿರ್ಧರಿಸಿದೆ. ಮೆಟ್ರೊ ನಗರಗಳಿಂದ ಶೇ. 26 ರಷ್ಟು ಮತ್ತು ಮೆಟ್ರೊ ಹೊರತಾದ ಹಾಗೂ 2ನೇ ಹಂತದ ಪಟ್ಟಣಗಳಿಂದ ಶೇ‌.15ರಷ್ಟು ಸುಸ್ಥಿರ ಪ್ರಗತಿಯನ್ನು ದೇಸಿ ಮಾರುಕಟ್ಟೆ ದಾಖಲಿಸಿದೆ.

ಈ ಕುರಿತು ಮಾತನಾಡಿದ ಥಾಮಸ್ ಕುಕ್ ಇಂಡಿಯಾದ ಹಾಲಿಡೇ, ಎಂಐಸಿಇ, ವೀಸಾ ವಿಭಾಗದ ಅಧ್ಯಕ್ಷರು ಹಾಗೂ ಕಂಟ್ರಿ ಹೆಡ್ ಆಗಿರುವ ರಾಜೀವ್ ಕಾಳೆ ಯೋಗವು ಅಪಾರ ಪ್ರವಾಸೋದ್ಯಮ ಅವಕಾಶಗಳನ್ನು ಒಳಗೊಂಡಿದೆ. ಇದು ದೇಶದ ಜಿಡಿಪಿಗೆ ಉತ್ತಮ ಪ್ರಗತಿಯ ಅವಕಾಶವನ್ನೂ ಒದಗಿಸಲಿದೆ ಎಂದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.