ವೀರನಪುರ: ಚಿರತೆ ಶವ ಪತ್ತೆ

7

ವೀರನಪುರ: ಚಿರತೆ ಶವ ಪತ್ತೆ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ವೀರನಪುರ ಸಮೀಪದ ಕಲ್ಲು ಕ್ವಾರಿಯ ಬಳಿಯಲ್ಲಿ ಚಿರತೆಯ ಶವ ಬುಧವಾರ ಸಂಜೆ ಪತ್ತೆಯಾಗಿದೆ. ಸಾವಿಗೆ ಏನು ಕಾರಣ ಎಂಬುದು ಸ್ಪಷ್ಟವಾಗಿಲ್ಲ.

ಮೃತದೇಹದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಚುಚ್ಚಿರುವುದು ಕಂಡು ಬಂದಿದ್ದು, ಮುಳ್ಳು ಹಂದಿಯೊಂದಿಗಿನ ಕಾದಾಟದಲ್ಲಿ ಚಿರತೆ ಸತ್ತಿರಬಹುದು ಎಂದು ಶಂಕಿಸಲಾಗಿದೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ. ಶಂಕರ್‌ ಅವರು, ‘ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸತ್ತಿಲ್ಲ. ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಚಿರತೆಯ ದೇಹದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡು ಬಂದಿದೆ. ಈ ಮುಳ್ಳುಗಳು ಚುಚ್ಚಿದ ಕಾರಣದಿಂದ ಚಿರತೆಗಳು ಮೃತಪಟ್ಟ ಹಲವು ನಿದರ್ಶನಗಳಿವೆ. ಸಿಬ್ಬಂದಿ ಸ್ಥಳಕ್ಕೆ ಭೇಟಿ, ಶವ ಪರೀಕ್ಷೆ ನಡೆಸಿದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ’ ಎಂದು ಹೇಳಿದರು. 

ಬುಧವಾರ ಸಂಜೆ ಕುರುಚಲು ಪ್ರದೇಶದ ಸಮೀಪದ ಕರಿಕಲ್ಲು ಕ್ವಾರಿಯ ಸಮೀಪ ಚಿರತೆ ಸತ್ತು ಬಿದ್ದಿರುವುದು ಗ್ರಾಮಸ್ಥರಿಗೆ ಕಂಡು ಬಂದಿದೆ. ತಕ್ಷಣ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. 

ಸಮೀಪದಲ್ಲಿರುವ ಕುರುಚಲು ಪ್ರದೇಶದಲ್ಲಿ, ಕರಿಕಲ್ಲು ಕ್ವಾರಿಯ ಪ್ರದೇಶದಲ್ಲಿ ಹಾಗೂ ಜಮೀನುಗಳಲ್ಲಿ ಚಿರತೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಸಹ ಅರಣ್ಯ ಇಲಾಖೆಗೆ ದೂರು ನೀಡಿದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !