ಗಾಯಗೊಂಡಿದ್ದ ಚಿರತೆ ಸೆರೆ

ಮಂಗಳವಾರ, ಜೂನ್ 25, 2019
30 °C

ಗಾಯಗೊಂಡಿದ್ದ ಚಿರತೆ ಸೆರೆ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಹೊನ್ನಹಳ್ಳಿ ಸಮೀಪದ ಜಮೀನಿನಲ್ಲಿ ಸೋಮವಾರ ಕಾಣಿಸಿಕೊಂಡ ಗಾಯಗೊಂಡಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ಚಿಕಿತ್ಸೆ ನೀಡಿದರು.

ಗ್ರಾಮದ ಮಹದೇವಶೆಟ್ಟಿ ಎಂಬುವರ ಜಮೀನಿನ ಮನೆ ಮುಂದೆ ಸುಮಾರು 5 ವರ್ಷದ ಗಂಡು ಚಿರತೆ ಸೋಮವಾರ ಮುಂಜಾನೆ ಕಂಡಿದೆ. ಮಹದೇವಶೆಟ್ಟಿ ಅವರ ಮಗ ನಾಗರಾಜು ಅವರು ಚಿರತೆಯನ್ನು ಕಂಡು ಗಾಬರಿಗೊಂಡಿದ್ದಾರೆ.  ತಕ್ಷಣ ಗ್ರಾಮಸ್ಥರು ಹಾಗೂ ಬಿಳಿಗಿರಿರಂಗನ ಬೆಟ್ಟದ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. 

ಈ ವೇಳೆಗೆ ಗಾಯಗೊಂಡ ಚಿರತೆಯು ಎಲ್‌ಐಸಿ ನಾಗೇಶ್ ಅವರ ಜಮೀನಿನ ಪಕ್ಕದ ಕಾಲುವೆಯಲ್ಲಿ ಮಲಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

‘ಜನರು ಚಿರತೆ ಕಂಡು ಗಾಬರಿಯಿಂದ ಕೂಗಾಡಿದರೂ ಗಂಡು ಚಿರತೆ ಯಾವುದೇ ಪ್ರತಿರೋಧ ವ್ಯಕ್ತಪಡಿಸುತ್ತಿರಲಿಲ್ಲ. ಕಾಲುವೆಯಲ್ಲೇ ಮಲಗಿತ್ತು. ಅದರ ಕತ್ತಿನ ಭಾಗದಲ್ಲಿ ಕಚ್ಚಿದ ಗಾಯಗಳಾಗಿತ್ತು’ ಎಂದು ಅವರು ತಿಳಿಸಿದರು.

ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರತಾಳನ್‌, ಪ್ರಭಾರ ಚಾಮರಾಜನಗರ ವಲಯಾರಣ್ಯಾಧಿಕಾರಿ ಮಹದೇವಯ್ಯ ಹಾಗೂ ಇತರ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು‌.

‘ಚಿರತೆಯ ಕತ್ತಿನ ಭಾಗದಲ್ಲಿ ಕಚ್ಚಿದ ಗಾಯಗಳಾಗಿರುವುದು ಕಂಡು ಬಂದಿದೆ. ಮತ್ತೊಂದು ಚಿರತೆಯೊಂದಿಗೆ ಕಾದಾಟ ನಡೆಸಿದ್ದರಿಂದ ಗಾಯಗಳಾಗಿವೆ. ವಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಮಹದೇವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !