ಬೇಲಿ ಬೇಕಿರುವುದು ಮನುಷ್ಯನಿಗೆ!

7

ಬೇಲಿ ಬೇಕಿರುವುದು ಮನುಷ್ಯನಿಗೆ!

Published:
Updated:

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳು ಕಾಡಿನಿಂದ ಹೊರಬರುವುದನ್ನು ತಡೆಯಲು ತೂಗುಬೇಲಿ ನಿರ್ಮಿಸಿರುವುದು ವರದಿಯಾಗಿದೆ (ಪ್ರ.ವಾ., ಜ. 3). ಈ ತೂಗು ಸೌರ ಬೇಲಿಯು ತಕ್ಷಣದ ಪರಿಹಾರ ಅಷ್ಟೇ. ಈ ಸಮಸ್ಯೆಗೆ ದೀರ್ಘಾವಧಿ ಪರಿಹಾರಗಳು ಬೇಕಾಗಿವೆ.

ಅಭಿವೃದ್ಧಿಯ ಹೆಸರಿನಲ್ಲಿ ನೆಲ, ಜಲ, ಆಕಾಶ ಎಲ್ಲವನ್ನೂ ಆಕ್ರಮಿಸುತ್ತಿರುವ ಮಾನವನ ದುರಾಸೆಗೆ ಮುಗ್ಧ ಕಾಡುಪ್ರಾಣಿಗಳು ಬಲಿಯಾಗುತ್ತಿವೆ. ಮನುಷ್ಯ ತನ್ನ ಅತಿ ಆಸೆಯನ್ನು ಈಡೇರಿಸಿಕೊಳ್ಳಲು ಇತರ ಪ್ರಾಣಿಗಳ ಆವಾಸ ಸ್ಥಾನವನ್ನು ಆಕ್ರಮಿಸಿ, ಅವುಗಳನ್ನು ಸೀಮಿತ ಪರಿಧಿಯೊಳಗೆ ಇರಿಸಲು ಬೇಲಿ ನಿರ್ಮಿಸಿದ್ದಾನೆ. ವಾಸ್ತವದಲ್ಲಿ ಮಾನವನೇ ದುಷ್ಟ ಪ್ರಾಣಿ.

ನಾವೇ ಸೃಷ್ಟಿಸಿದ ಹಲವಾರು ಸಮಸ್ಯೆಗಳಿಂದಾಗಿ ಆನೆ ಹಾಗೂ ಇತರ ಅನೇಕ ಕಾಡುಪ್ರಾಣಿಗಳು ಸಾಯುತ್ತಿವೆ. ಹಾಗೆ ನೋಡಿದರೆ ಕಾಡು ಪ್ರಾಣಿಗಳು ಜನರಿಗೆ ತೊಂದರೆ ಕೊಡುತ್ತಿಲ್ಲ. ಬದಲಾಗಿ ನಾವೇ ಅವುಗಳಿಗೆ ತೊಂದರೆ ನೀಡುತ್ತಿದ್ದೇವೆ. ಇನ್ನಾದರೂ ನಮ್ಮ ದುರಾಸೆಗಳಿಗೆ ಬೇಲಿ ಹಾಕಿಕೊಳ್ಳೋಣ. ಪ್ರಾಣಿಗಳಿಗೆ ಸ್ವಾತಂತ್ಯ್ಯವನ್ನು ನೀಡೋಣ.

ದರ್ಶನ್ ಕೆ.ಒ., ದೇವಿಕೆರೆ ಹೊಸೂರು

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !