ಮುಷ್ಕರ ಕಾರ್ಮಿಕ ಹೋರಾಟದ ದಿಕ್ಸೂಚಿಯಾಗಿತ್ತು

7

ಮುಷ್ಕರ ಕಾರ್ಮಿಕ ಹೋರಾಟದ ದಿಕ್ಸೂಚಿಯಾಗಿತ್ತು

Published:
Updated:

ವಿವಿಧ ಕಾರ್ಮಿಕ ಸಂಘಟನೆಗಳು ಇತ್ತೀಚೆಗೆ ಕರೆ ನೀಡಿದ್ದ ಭಾರತ್‌ ಬಂದ್‌ ಯಶಸ್ವಿಯಾಯಿತೇ ಇಲ್ಲವೇ ಎಂಬುದು ಬೇರೆ ಮಾತು. ಆದರೆ, ಅದು ಕಾರ್ಮಿಕ ಹೋರಾಟದ ದಿಕ್ಸೂಚಿಯಾಗಿತ್ತು ಎಂಬುದು ಮುಖ್ಯ. ಕಾರ್ಮಿಕರ ಸಾಮಾಜಿಕ ಭದ್ರತೆಯೂ ಒಳಗೊಂಡಂತೆ 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸಿದ್ದ ಈ ಮುಷ್ಕರಕ್ಕೆ ಹೆಚ್ಚಿನ ಜನಬೆಂಬಲ ಲಭಿಸಬೇಕಿತ್ತು. ಶ್ರಮಿಕರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದ ಈ ಹೋರಾಟವನ್ನು ಕೆಲವು ಮಾಧ್ಯಮಗಳು ‘ಬಿಜೆಪಿ ವಿರುದ್ಧದ ಕಮ್ಯುನಿಸ್ಟರ ಹೋರಾಟ’ ಎಂಬಂತೆ ಬಿಂಬಿಸಿ, ಕಾರ್ಮಿಕರ ಬವಣೆಯ ಧ್ವನಿಯನ್ನು ಸುದ್ದಿಯ ಸರಕಾಗಿಸಿದ್ದು ದುರಂತವೇ ಸರಿ.

ಆಳುವ ಸರ್ಕಾರಗಳ ಧೋರಣೆಯು ಬಂಡವಾಳಶಾಹಿಗಳ ಪರವಾಗಿರುವುದರಿಂದ ಕಾರ್ಮಿಕರ ಶ್ರಮವು ಅಗ್ಗದ ಕೂಲಿಗೆ ಬಿಕರಿಯಾಗುತ್ತಿದೆ. ಕಾರ್ಮಿಕರಿಗೆ ಸಿಗಬೇಕಾದ ಸಾಮಾಜಿಕ ಭದ್ರತೆಯನ್ನು ಹಂತ ಹಂತವಾಗಿ ಮೊಟಕುಗೊಳಿಸಲಾಗುತ್ತಿದೆ. ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಗೆ ಅವಕಾಶವಿಲ್ಲದಂತಾಗಿದೆ. ಕಾರ್ಮಿಕ ಕಾನೂನುಗಳು ಶ್ರಮಿಕರ ಹಿತ ಕಾಯುವಲ್ಲಿ ವಿಫಲವಾಗುತ್ತಿವೆ. ಸಾಮಾಜಿಕ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿರುವ ಸರ್ಕಾರಗಳು ಎಲ್ಲವನ್ನೂ ಖಾಸಗೀಕರಣಗೊಳಿಸುತ್ತಿರುವುದರ ಪರಿಣಾಮವಾಗಿ ದೇಶದ ಆರ್ಥಿಕ ಸಂಪನ್ಮೂಲಗಳೆಲ್ಲ ಬಂಡವಾಳಿಗರ ವಶವಾಗುತ್ತಿವೆ. ಶಿಕ್ಷಣ, ಆರೋಗ್ಯದಂತಹ ಅಗತ್ಯ ಸೇವೆಗಳು ಸಹ ಕಾರ್ಪೊರೇಟ್ ವಲಯದ ಹಿಡಿತಕ್ಕೆ ಸಿಲುಕಿವೆ. ಕೋಟ್ಯಂತರ ಶ್ರಮಿಕರು ದಿನಗೂಲಿ ಅಥವಾ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಾ ಅಭದ್ರತೆಯ ಬೆಂಕಿಯಲ್ಲಿ ಬೇಯುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿದರೆ, ಶ್ರಮಿಕರ ಬೆವರಿನ ಫಲ ಅನುಭವಿಸುವ ಪ್ರಜ್ಞಾವಂತ ನಾಗರಿಕರು ಬೆಂಬಲಿಸಬೇಕಾದ್ದು ನ್ಯಾಯವಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !