ಈ ಕ್ಷಣದಲ್ಲಿ ಬದುಕು

7

ಈ ಕ್ಷಣದಲ್ಲಿ ಬದುಕು

Published:
Updated:

ಇದೊಂದು ಪ್ರಸಿದ್ಧವಾದ ಕಥೆ. ಬಹುಶಃ ಹಲವು ಸಲ ಕೇಳಿರಬಹುದು; ಓದಿರಲೂಬಹುದು. ಆದರೆ ಮರೆತುಬಿಟ್ಟಿರುತ್ತೇವೆ. ಪ್ರತಿ ಕ್ಷಣವೂ ನಮ್ಮಲ್ಲಿ ಉಳಿಯಬೇಕಾದ ಕಥೆ ಇದು. ಹೀಗಾಗಿ ಮತ್ತೊಮ್ಮೆ ಅದನ್ನು ಮೆಲುಕು ಹಾಕೋಣ.

ಒಬ್ಬ ಕಾಡಿನಲ್ಲಿ ನಡೆದು ಬರುತ್ತಿದ್ದ. ಹುಲಿಯೊಂದು ಅಟ್ಟಿಸಿಕೊಂಡು ಬರಲು ತೊಡಗಿತು. ಅವನು ಓಡತೊಡಗಿದ. ಓಡುತ್ತ ಓಡುತ್ತ ಪ್ರಪಾತವೊಂದಕ್ಕೆ ಜಾರಿದ. ಆದರೆ ಅವನು ಬೀಳುವಾಗ ಬಳ್ಳಿಯೊಂದನ್ನು ಹಿಡಿದುಕೊಂಡ. ಹೀಗಾಗಿ ಪ್ರಪಾತದ ಆಳಕ್ಕೆ ಬೀಳಲಿಲ್ಲ. ಹಿಡಿದಿರುವ ಬಳ್ಳಿಯನ್ನು ಬಿಟ್ಟರೆ ಕೆಳಕ್ಕೆ ಬೀಳುತ್ತಿದ್ದ. ಹೀಗೆಂದು ಬಳ್ಳಿಯನ್ನೇ ಹಿಡಿದು ಮೇಲಕ್ಕೆ ಏರಿಬಂದರೆ ಅಲ್ಲಿಯೇ ಹುಲಿ ಅವನಿಗಾಗಿ ಕಾಯುತ್ತಿದೆ! ಬಳ್ಳಿಯನ್ನು ಅವನೊಮ್ಮೆ ನೋಡಿದ. ಅದರಲ್ಲಿ ಹಣ್ಣುಗಳಿದ್ದವು. ಅವನು ಹಣ್ಣನ್ನು ಕಿತ್ತು ತಿನ್ನಲು ತೊಡಗಿದ.

ಕಥೆ ಇಷ್ಟೇ. ಆದರೆ ಅದು ಕೊಡುವ ಸಂದೇಶ ತುಂಬ ದೊಡ್ಡದು.

ಈ ಕ್ಷಣದಲ್ಲಿ ಬದುಕು. ಇದೇ ಕಥೆಯ ಉಪದೇಶ. ನಾವು ಸಾಮಾನ್ಯವಾಗಿ ನೆನ್ನೆಯ ಬಗ್ಗೆಯೋ ಅಥವಾ ನಾಳೆಯ ಬಗ್ಗೆಯೋ ಯೋಚಿಸುತ್ತ ಯೋಚಿಸುತ್ತ ಇಂದಿನ ದಿನವನ್ನೇ ಮರೆಯುತ್ತಿರುತ್ತೇವೆ. ಹೀಗೆ ಮಾಡುವುದರಿಂದ ನಮ್ಮ ಜೀವನ ನಮ್ಮಿಂದ ತಪ್ಪಿಸಿಕೊಂಡುಹೋಗುತ್ತಿರುತ್ತದೆ. ಹೀಗಲ್ಲದೆ ಈಗ ನಾವು ಯಾವ ಕೆಲಸವನ್ನು ಮಾಡುತ್ತಿದ್ದೇವೆಯೋ ಆ ಕೆಲಸದಲ್ಲಿ, ಎಂದರೆ ಈ ಕ್ಷಣದಲ್ಲಿ, ಪೂರ್ಣವಾಗಿ ತೊಡಗಿದರೆ ಆಗ ನಮಗೆ ಬದುಕಿನ ನಿಜವಾದ ಸಂತೋಷ ಸಿಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !