ಸೋಮವಾರ, ಸೆಪ್ಟೆಂಬರ್ 16, 2019
26 °C

ಬಸವ ಜಯಂತಿ: ಗೋಷ್ಠಿ ಮೇ 11ರಿಂದ

Published:
Updated:

ಸೊಲ್ಲಾಪುರ: ಬಸವ ಜಯಂತಿ ಅಂಗವಾಗಿ ದಕ್ಷಿಣ ಸೊಲ್ಲಾಪುರ ತಾಲ್ಲೂಕಿನ ಕಂದಲಗಾವದ ಯಶರಾಜ ಫಾರ್ಮ್‌ಹೌಸ್‌ನಲ್ಲಿ ಸೊಲ್ಲಾಪುರದ ಲಿಂಗಾಯತ ಸೇವಾ ಸಂಘದ ವತಿಯಿಂದ, ಮರಾಠಿಯಲ್ಲಿ ಮೇ 11, 12ರಂದು ರಾಜ್ಯ ಮಟ್ಟದ ಚರ್ಚಾ ಗೋಷ್ಠಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ಮಹಾದೇವ ಜೋಕಾರೆ ತಿಳಿಸಿದರು.

ಎರಡು ದಿನ ಸತತವಾಗಿ ಗೋಷ್ಠಿಗಳು ನಡೆಯಲಿದ್ದು, ವಸತಿ–ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಭಾಗಿಯಾಗಬೇಕು. ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಶನಿವಾರ ಲಿಂಗಾಯತರ ಪೂರ್ವ ಇತಿಹಾಸ, ಬಾರಾವ್ಯಾ ಶತಕಾತಿಲ ಲಿಂಗಾಯತ ಚಳವಳಿ, ಲಿಂಗಾಯತ ಚಳವಳಿ ಶಿವಯೋಗಿ ಸಿದ್ಧರಾಮೇಶ್ವರಾಚೆ ಯೋಗದಾನ, ಮಿ ಲಿಂಗಾಯತ, ಮಾಝ್ಯಾ ಧರ್ಮ ಲಿಂಗಾಯತ ಕುರಿತಂತೆ ಗೋಷ್ಠಿ ನಡೆಯಲಿವೆ.

ಭಾನುವಾರ ಸಾಮೂಹಿಕ ಇಷ್ಟಲಿಂಗಪೂಜೆ ನಡೆಯಲಿದೆ. ಇಷ್ಟಲಿಂಗ ಯೋಗ, ಮರಾಠಿ ಶರಣ ಪರಂಪರಾ, ಲಿಂಗಾಯತ ಚಳವಳಿ ಸದ್ಯದ ಸ್ಥಿತಿ ಕುರಿತಂತೆ ಗೋಷ್ಠಿ ಜರುಗಲಿವೆ ಎಂದು ಡಾ.ಮಹಾದೇವ ಜೋಕಾರೆ ಹೇಳಿದರು.

Post Comments (+)