ಎಂ.ಬಿ.ಪಾಟೀಲ ನಿರ್ಧಾರಕ್ಕೆ ಬದ್ಧ; ಹೊರಟ್ಟಿ

ಶನಿವಾರ, ಏಪ್ರಿಲ್ 20, 2019
29 °C

ಎಂ.ಬಿ.ಪಾಟೀಲ ನಿರ್ಧಾರಕ್ಕೆ ಬದ್ಧ; ಹೊರಟ್ಟಿ

Published:
Updated:

ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ಗೃಹಸಚಿವ ಎಂ.ಬಿ.ಪಾಟೀಲ ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಿರುವೆ’ ಎಂದು ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.

‘ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್‌ ಆಗ ಸುಮ್ಮನಿದ್ದರು. ಇದೀಗ ಏನೇನೋ ಹೇಳುತ್ತಿದ್ದಾರೆ. ಈ ಹಿಂದೆ ದೇವೇಗೌಡರ ಬಗ್ಗೆಯೂ ಹೀಗೆ ಮಾತನಾಡಿದ್ದರು. ಈಗ ಒಂದಾಗಿದ್ದಾರೆ’ ಎಂದು ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಹೊರಟ್ಟಿ ಪ್ರತಿಕ್ರಿಯಿಸಿದರು.

‘ವೀರಶೈವ–ಲಿಂಗಾಯತರ ನಡುವೆ ಯಾವುದೇ ತಕರಾರಿಲ್ಲ. ಡಿಕೆಶಿ ಬೆಂಕಿ ಹಚ್ಚಿ ತುಪ್ಪ ಸುರಿಯುವ ಕೆಲಸ ಮಾಡಬಾರದು’ ಎಂದು ಹೊರಟ್ಟಿ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !