ಪಶ್ಚಾತ್ತಾಪವಾಗಿದ್ದರೇ ರಾಜಕಾರಣದಿಂದ ಹೊರಗುಳಿಯಿರಿ: ಎ.ಎಸ್.ಪಾಟೀಲ ನಡಹಳ್ಳಿ

ಶುಕ್ರವಾರ, ಏಪ್ರಿಲ್ 19, 2019
27 °C
ಗೃಹಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ

ಪಶ್ಚಾತ್ತಾಪವಾಗಿದ್ದರೇ ರಾಜಕಾರಣದಿಂದ ಹೊರಗುಳಿಯಿರಿ: ಎ.ಎಸ್.ಪಾಟೀಲ ನಡಹಳ್ಳಿ

Published:
Updated:

ವಿಜಯಪುರ: ‘ಅಧಿಕಾರಕ್ಕಾಗಿ ಸಮಾಜದ ನಡುವೆ ಬೆಂಕಿ ಹಚ್ಚಿದ್ದಕ್ಕಾಗಿ, ಸಮಾಜ ಒಡೆಯುವ ನೀಚ ಕೆಲಸ ಮಾಡಿದ್ದಕ್ಕೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆಸಿದ್ದಕ್ಕೆ ನಿಮಗೆ ಪಶ್ಚಾತ್ತಾಪವಾಗಿದ್ದರೆ, ರಾಜಕಾರಣದಿಂದ ಹೊರಗುಳಿಯಿರಿ’ ಎಂದು ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಗೃಹಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಇದೀಗ ಪ್ರಶ್ನಿಸಿದರೆ, ಅದನ್ನು ಬಿಟ್ಬಿಡಿ ಅನ್ನೋದು ಯಾಕೆ. ನಿಮ್ಮ ತಪ್ಪನ್ನು ಜನ ಕ್ಷಮಿಸಬೇಕಾ ?’ ಎಂದು ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಸರಣಿ ಪ್ರಶ್ನೆಗಳ ಸುರಿಮಳೆಗೈದರು.

‘ನಿಮ್ಮನ್ನು ಯಾಕ್ರೀ ಬಿಡಬೇಕು. ನಿಮ್ಮ ತಪ್ಪನ್ನು ಕ್ಷಮಿಸಬೇಕಾ. ಒಂದು ವೇಳೆ ನಿಮಗೆ ಮಾಡಿದ ತಪ್ಪಿಗೆ ಪಶ್ಚಾತ್ತಾಪವಾಗಿದ್ದರೆ, ಮೊದಲು ರಾಜಕೀಯದಿಂದ ಹೊರಬನ್ನಿ’ ಎಂದು ನಡಹಳ್ಳಿ ಪುನರುಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !