ಬುಧವಾರ, ಫೆಬ್ರವರಿ 19, 2020
28 °C

85ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರತ್ಯೇಕ ಲಾಂಛನ ಬೇಕಿದೆ

Published:
Updated:
ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಗರಿ ಕಣಜ ಸಿದ್ಧಗೊಂಡಿದೆ. ಗುಲಬರ್ಗಾ ವಿಶ್ವವಿದ್ಯಾಲಯದ 35 ಎಕರೆ ವಿಶಾಲ ಜಾಗದಲ್ಲಿ ಮಂಟಪ ತಲೆ ಎತ್ತಿದೆ. ದ್ವಾರದ ಮುಂದೆ ಮಂದಸ್ಮಿತ ಬೀರುತ್ತಿರುವ ಬಸವಣ್ಣನ ಮೂರ್ತಿ ‘ಇವ ನಮ್ಮವ’ ಎನ್ನುತ್ತ ಬಂದವರೆಲ್ಲರನ್ನೂ ಪ್ರೀತಿಯಿಂದ ಒಳಗೆ ಬರಮಾಡಿಕೊಳ್ಳುತ್ತಿದೆ.
 • 04:10 pm

  ಸರ್ಕಾರಿ ‌ಶಾಲೆ ಉಳಿಸಲು ಪೋಷಕರ ಸಹಕಾರ ಅಗತ್ಯ: ಸಾಹಿತ್ಯ ಸಮ್ಮೇಳನದಲ್ಲಿ ಬಿಎಸ್‌ವೈ

 • 03:52 pm

  ಪ್ರತ್ಯೇಕ ಲಾಂಛನ ಬೇಕು

  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದರದೇ ಆದ ಲಾಂಛನವನ್ನು ಘೋಷಿಸಬೇಕು ಎಂದು ಸಮ್ಮೇಳನದ ಲ್ಲಿ ಭಾಗವಹಿಸಿದ್ದ ಕನ್ನಡ ಆಸಕ್ತರೊಬ್ಬರು ಆಗ್ರಹಿಸಿದರು

 • 03:50 pm

  ಕನ್ನಡದ ಪುನುರುತ್ಥಾನವಾಗಬೇಕಿದೆ

  ಕನ್ನಡ ಭಾಷೆಗೆ ಇರುವ ಆತಂಕ ದೂರವಾಗಬೇಕಾದರೆ, ಕನ್ನಡದ ಪುನುರುತ್ಥಾನವಾಗಬೇಕಿದೆ.

  -ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ 

 • 03:26 pm

  ನಾಡಗೀತೆಗೆ ಗೌರವ

  ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ‌ ಎಚ್.ಎಸ್.ವೆಂಕಟೇಶ ಮೂರ್ತಿ,  ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಗೋವಿಂದ ‌ಕಾರಜೋಳ, ಕನ್ನಡ ಮತ್ತು ಸಂಸ್ಕೃತಿ ಸಚಿವ ‌ಸಿ.ಟಿ.ರವಿ, ಕಸಾಪ‌ ಅಧ್ಯಕ್ಷ ಮನು ಬಳಿಗಾರ್ ಎದ್ದುನಿಂತು ‌ನಾಡಗೀತೆಗೆ ಗೌರವ ಸಲ್ಲಿಸಿದರು .

 • 12:27 pm

 • 12:02 pm

  85 ಸ್ವಾಗತ ಕಮಾನುಗಳು ಇಲ್ಲಿವೆ

 • 11:29 am

  ನಗರಕ್ಕೆ ‌ಬಂದಿಳಿದ ಮುಖ್ಯಮಂತ್ರಿ ಯಡಿಯೂರಪ್ಪ

  ಕನ್ನಡ ಸಾಹಿತ್ಯ ‌ಸಮ್ಮೇಳನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಶೇಷ ‌ವಿಮಾನದ ಮೂಲಕ ನಗರಕ್ಕೆ‌ ಬಂದಿಳಿದರು.

  ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮುಗಿದ ಬಳಿಕ ಗುಲಬರ್ಗಾ ‌ವಿ.ವಿ.ಯ ಶ್ರೀವಿಜಯ ವೇದಿಕೆಯಲ್ಲಿ ನಡೆಯುವ 85ನೇ ಅಖಿಲ ಭಾರತ ಕನ್ನಡ ‌ಸಾಹಿತ್ಯ ಸಮ್ಮೇಳನಕ್ಕೆ ‌ಚಾಲನೆ ನೀಡುವರು.

  ಸೇಡಂ ರಸ್ತೆಯಲ್ಲಿ ಸಂಚಾರಕ್ಕೆ ‌ತಡೆ

  ಕಲಬುರ್ಗಿ ನಗರದಿಂದ 12 ಕಿ.ಮೀ. ದೂರವಿರುವ ‌ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ‌ಯಡಿಯೂರಪ್ಪ ಅವರು ರಸ್ತೆ ಮೂಲಕ ಸಾಹಿತ್ಯ ‌ಸಮ್ಮೇಳನ ನಡೆಯಲಿರುವ ಗುಲಬರ್ಗಾ ‌ವಿ.ವಿ.ಗೆ ಬರುವುದಕ್ಕಾಗಿ ಸೇಡಂ ರಸ್ತೆಯಲ್ಲಿ ಜೀರೊ ಟ್ರಾಫಿಕ್ ವ್ಯವಸ್ಥೆ ‌ಮಾಡಿದ್ದರು.

  ಹೀಗಾಗಿ ವಿ.ವಿ. ಪಕ್ಕದ ‌ಇಎಸ್ಐ ಆಸ್ಪತ್ರೆ ‌ಪಕ್ಕದ ರಸ್ತೆಯಲ್ಲೇ ‌ವಾಹನಗಳನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ‌ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುವವರೂ ರಸ್ತೆಯಲ್ಲಿ ‌ಸಿಕ್ಕಿಹಾಕಿಕೊಂಡಿದ್ದಾರೆ.

 • 10:31 am

  ಅಲಂಕೃತ ವಾಹನದಲ್ಲಿ ಸಾಗಿದ ಸಮ್ಮೇಳನಾಧ್ಯಕ್ಷರು

  ಸಮ್ಮೇಳನದ ಅಧ್ಯಕ್ಷ ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅವರು ಒಂದೇರಥದಲ್ಲಿ ಕುಳಿತು ಮೆರವಣಿಗೆ ಸಾಗಿದರು. ಇದರ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ 30 ಅಧ್ಯಕ್ಷರನ್ನು ಹೊತ್ತ 10 ಅಲಂಕೃತ ವಾಹನಗಳ ಸಾಲು ಸಾಗಿ ಬಂದಿತು

 • 10:28 am

  ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅದ್ಧೂರಿ ಚಾಲನೆ

 • 09:20 am

  ಮೆರವಣಿಗೆಯ ರಂಗು ಹೆಚ್ಚಿಸುವ ಕಲಾತಂಡಗಳು

  85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಸಜ್ಜಾಗುತ್ತಿವೆ ವಿವಿಧ ಕಲಾ ತಂಡಗಳು

 • 09:13 am
 • 08:20 am

  8.15ಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 8.18ಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಅವರು ನಾಡಧ್ವಜಾರೋಹಣ ಮಾಡಿದರು. ಮಕ್ಕಳಿಂದ ನಾಡಗೀತೆ ಗಾಯನ, ಗಣ್ಯರಿಂದ ಗೌರವ ಸಲ್ಲಿಕೆ. 

  ‘ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಒತ್ತಾಯಿಸುವ ಬದಲು ಕನ್ನಡನಾಡು, ನುಡಿ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ತೊಡಗಬೇಕು’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

  ‘ಯಾವುದೇ ಕಾರಣಕ್ಕೂ ವೈಮನಸ್ಸು ಮೂಡಿಸಿಕೊಳ್ಳಬಾರದು. ಕನ್ನಡ ಕಟ್ಟುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದರು.

 • 08:07 am

 • 07:53 am

  ಬೆಳಿಗ್ಗೆ 8ಕ್ಕೆ ಧ್ವಜಾರೋಹಣ

  ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ನಡೆಯಲಿದೆ. ಈಗಾಗಲೇ ಸಿದ್ಧತಾ ಪ್ರಕ್ರಿಯೆ ಆರಂಭಗೊಂಡಿದೆ. ರಾಷ್ಟಧ್ವಜವನ್ನು ಸಚಿವ ಗೋವಿಂದ ಕಾರಜೋಳ, ಪರಿಷತ್ತಿನ ಧ್ವಜವನ್ನು ಮನು ಬಳಿಗಾರ್ ಮತ್ತು ನಾಡ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಆರೋಹಣ ಮಾಡುವರು.

 • 07:50 am

  ಸೆಲ್ಫಿಯಿಂದ ಶುರುವಾಗುತ್ತಿದೆ ಸಮ್ಮೇಳನದ ಹಬ್ಬ

  85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕಲಬುರ್ಗಿ ಸಜ್ಜುಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕುಗಳಿಂದ ಸಾಹಿತ್ಯಾಸಕ್ತರು, ಪ್ರತಿನಿಧಿಗಳು ಸಮ್ಮೇಳನಕ್ಕೆ ಬರುತ್ತಿದ್ದಾರೆ. ಸಮ್ಮೇಳನ ದ್ವಾರ ಪ್ರವೇಶಿಸುತ್ತಿದ್ದಂತೆಯೇ ಬಹುತೇಕ ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.