ಸಾಲ ಮನ್ನಾ: ಸ್ಪಷ್ಟನೆ ಕೇಳಿದ ಹಣಕಾಸು ಇಲಾಖೆ

ಬುಧವಾರ, ಮಾರ್ಚ್ 20, 2019
31 °C

ಸಾಲ ಮನ್ನಾ: ಸ್ಪಷ್ಟನೆ ಕೇಳಿದ ಹಣಕಾಸು ಇಲಾಖೆ

Published:
Updated:

ಬೆಂಗಳೂರು: ಲೋಕಸಭಾ ಚುನಾವಣಾ ನೀತಿಸಂಹಿತೆ ಘೋಷಣೆಯಾಗಿರುವ ಕಾರಣ ರೈತರ ಸಾಲ ಮನ್ನಾ ಯೋಜನೆಯನ್ನು ಮುಂದುವರಿಸಬಹುದೇ ಎಂದು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಲು ಹಣಕಾಸು ಇಲಾಖೆ ತೀರ್ಮಾನಿಸಿದೆ.

‘ಈ ಯೋಜನೆಯನ್ನು ಎಂಟು ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಇದು ಅನುಷ್ಠಾನದ ಹಂತದಲ್ಲಿದೆ. ಇದು ಹೊಸ ಯೋಜನೆ ಅಲ್ಲ. ಇದನ್ನು ಮುಂದುವರಿಸಲು ಅನುಮತಿ ನೀಡುವಂತೆ ಕೋರಲಿದ್ದೇವೆ’ ಎಂದು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್ ತಿಳಿಸಿದರು.

ರಾಜ್ಯ ಸರ್ಕಾರ ಇಲ್ಲಿಯವರೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ 15.58 ಲಕ್ಷ ರೈತರ ₹6,222 ಕೋಟಿ ಸಾಲ ಮನ್ನಾ ಮಾಡಿದೆ. ಮಾರ್ಚ್‌ 5 ಹಾಗೂ ಮಾರ್ಚ್‌ 10ರ ನಡುವೆ ₹2,076 ಕೋಟಿ ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !