ಎನ್‌ಡಿಎ ಸರ್ಕಾರ ಉದ್ಯಮಿ ಪರ: ಕೃಷ್ಣ ಬೈರೇಗೌಡ

ಶುಕ್ರವಾರ, ಏಪ್ರಿಲ್ 19, 2019
27 °C

ಎನ್‌ಡಿಎ ಸರ್ಕಾರ ಉದ್ಯಮಿ ಪರ: ಕೃಷ್ಣ ಬೈರೇಗೌಡ

Published:
Updated:

ಹೆಸರಘಟ್ಟ: ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ನಾವು ಕೇಳಿದಾಗ ‘ದುಡ್ಡು ತಯಾರಿಸುವ ಯಂತ್ರ ನಮ್ಮ ಬಳಿ ಇಲ್ಲ’ ಎಂದು ಹೇಳಿದ್ದರು. ಆದರೆ ಈಗಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಉದ್ಯಮಿಗಳ ₹ 3 ಲಕ್ಷ ಕೋಟಿ ಸಾಲವನ್ನು ಮನ್ನ ಮಾಡಿದ್ದು ಹೇಗೆ’ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ಹೆಸರಘಟ್ಟ ಮುಖ್ಯರಸ್ತೆಯ ಚಿಕ್ಕಬಾಣಾವರ ಗ್ರಾಮದಲ್ಲಿ ಅವರು ಮತಯಾಚನೆ ಮಾಡಿ ಮಾತನಾಡಿದರು.

‘ಮೋದಿ ಅವರು ಗುಜರಾತ್‍ಗೆ ಬರಗಾಲ ಪರಿಹಾರವೆಂದು ₹4,000 ಕೋಟಿ ನೀಡಿದರು. ಆದರೆ ನಮ್ಮ ರಾಜ್ಯಕ್ಕೆ ನೀಡಿದ್ದು ಕೇವಲ ₹ 940 ಕೋಟಿ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಅವರದ್ದು’ ಎಂದು ಟೀಕಿಸಿದರು.  

‘ಚಿಕ್ಕಬಾಣಾವರದಿಂದ ಗಾಣಿಗರ ಹಳ್ಳಿ ರಸ್ತೆಗೆ ಅನುದಾನ ಮಂಜೂರು ಮಾಡಿರಲಿಲ್ಲ. ಆದರೂ ಪ್ರಚಾರದ ಹುಚ್ಚಿಗೆ ಶಂಕುಸ್ಥಾಪನೆ ಮಾಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಮಗಾರಿ ಚುರುಕುಗೊಂಡಿವೆ’ ಎಂದರು.

ಬರಹ ಇಷ್ಟವಾಯಿತೆ?

  • 2

    Happy
  • 0

    Amused
  • 0

    Sad
  • 0

    Frustrated
  • 2

    Angry

Comments:

0 comments

Write the first review for this !