‘ಯುವ ಮತದಾರರು ರಾಜಕೀಯ ಅಮಲಿನಲ್ಲಿ ತೇಲಬೇಡಿ’

ಶುಕ್ರವಾರ, ಏಪ್ರಿಲ್ 19, 2019
30 °C
ವೋಟ್‌ ಮಾಡೋಣ ಬನ್ನಿ

‘ಯುವ ಮತದಾರರು ರಾಜಕೀಯ ಅಮಲಿನಲ್ಲಿ ತೇಲಬೇಡಿ’

Published:
Updated:
Prajavani

ಮತ ಹಾಕೋದು ನಮ್ಮೆಲ್ಲರ ಜವಾಬ್ದಾರಿ. ಆದರೆ ಚುನಾವಣೆಯಲ್ಲಿ ಯೋಗ್ಯರನ್ನ ಗುರುತಿಸುವುದು ಕಷ್ಟಕರ. ಸರಿಯಾದ ವ್ಯಕ್ತಿಗೆ ಮತ ಹಾಕದಿದ್ದಲ್ಲಿ ನಮ್ಮ ನಿರ್ಧಾರದಲ್ಲಿ ಎಡವಿದಂತೆ.

ಯುವ ಮತದಾರರು ಯಾವುದೇ ರಾಜಕೀಯ ಅಮಲಿನಲ್ಲಿ ತೇಲಬಾರದು. ನಮ್ಮ ಕಣ್ಣಿಗೆ ಕಾಣುತ್ತಿರುವು‌ದಷ್ಟೇ ನಿಜವಲ್ಲ. ರಾಜಕಾರಣಿಗಳ ಭಾಷಣಗಳನ್ನು ವಿಮರ್ಶೆಗೆ ಒಳಪಡಿಸದೆ ಅವರ ಮಾತಿಗೆ ಮರುಳಾಗಬಾರದು. ತಾಳ್ಮೆಯಿಂದ ಅಭ್ಯರ್ಥಿಯ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅವಲೋಕಿಸಿ ಮತ ಹಾಕಬೇಕು. ಯಾವುದೇ ವ್ಯಕ್ತಿ, ಯಾವುದೇ ಪಕ್ಷ ದೊಡ್ಡದಲ್ಲ. ತಳವರ್ಗದ ಆಲೋಚನೆಗಳು ಹಾಗೂ ಮೂಲ ಸೌಕರ್ಯಗಳಾದ ಅನ್ನ, ನೀರು, ಪರಿಸರ, ಶಿಕ್ಷಣ, ಆರೋಗ್ಯ ವಿಚಾರಗಳಿಗೆ ಒತ್ತು ನೀಡುವವರಿಗೆ ಮತ ಹಾಕೋಣ.

– ಜಯತೀರ್ಥ, ಸಿನಿಮಾ ನಿರ್ದೇಶಕ 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !