ಲಾರಿ ಉರುಳಿ ಕ್ಯಾಬ್‌ ಚಾಲಕ ಸಾವು

7
ಅಪಘಾತ

ಲಾರಿ ಉರುಳಿ ಕ್ಯಾಬ್‌ ಚಾಲಕ ಸಾವು

Published:
Updated:
ಕ್ಯಾಬ್‌ ಮೇಲೆ ಬಿದ್ದಿರುವ ಲಾರಿ

ಬೆಂಗಳೂರು: ನಾಗವಾರ ಫ್ಲೈ ಓವರ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕ್ಯಾಬ್‌ ಮೇಲೆ ಬಿದ್ದಿದ್ದರಿಂದ ಕ್ಯಾಬ್‌ ಚಾಲಕ ಪ್ರತಾಪ್‌ (26) ಮೃತಪಟ್ಟಿದ್ದಾರೆ.

ಪ್ರತಾಪ್‌ ಖಾಸಗಿ ಕಂಪನಿಯ ಉದ್ಯೋಗಿಗಳನ್ನು ಮನೆಗೆ ಡ್ರಾಪ್ ಮಾಡಲು ನಾಗವಾರಕ್ಕೆ ತೆರಳುತ್ತಿದ್ದಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಯ ಟೈರ್‌ ಸ್ಫೋಟಗೊಂಡಿದೆ. ಆಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಫ್ಲೈ ಓವರ್‌ಗೆ ಡಿಕ್ಕಿ ಹೊಡೆದು ಕ್ಯಾಬ್‌ ಮೇಲೆ ಬಿದ್ದಿದೆ.

ಅಪಘಾತ ನಡೆದಾಗ ಕ್ಯಾಬ್‌ನಲ್ಲಿ ಮೂವರು ಉದ್ಯೋಗಿಗಳು ಇದ್ದರು. ಲಾರಿ ಬೀಳುತ್ತಿದ್ದುದನ್ನು ನೋಡಿದ ಮೂವರೂ ಕೆಳಗೆ ಇಳಿದಿದ್ದಾರೆ. ಚಾಲಕ ಕೆಳಗೆ ಇಳಿಯುವುದರೊಳಗೆ ಲಾರಿ ಕ್ಯಾಬ್‌ನ ಮೇಲೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !