ಲಾಟರಿ ನಂಬಿ ₹2.59 ಲಕ್ಷ ಕಳೆದುಕೊಂಡರು

7

ಲಾಟರಿ ನಂಬಿ ₹2.59 ಲಕ್ಷ ಕಳೆದುಕೊಂಡರು

Published:
Updated:

ಬೆಂಗಳೂರು: ‘₹2.48 ಕೋಟಿ ಲಾಟರಿ ಬಹುಮಾನ ಬಂದಿದೆ‘ ಎಂದು ಹೇಳಿದ್ದ ಅಪರಿಚಿತನ ಮಾತು ನಂಬಿ, ನಗರದ ನಿವಾಸಿ ಎ. ಭಾನು ಎಂಬುವರು ₹2.59 ಲಕ್ಷ ಕಳೆದುಕೊಂಡಿದ್ದಾರೆ.

ತಮಗಾದ ವಂಚನೆ ಸಂಬಂಧ ಭಾನು, ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಜುಲೈ 23ರಂದು ದೂರುದಾರರಿಗೆ ಇ–ಮೇಲ್ ಕಳುಹಿಸಿದ್ದ ಅಪರಿಚಿತ, ‘ಆಡಿ ಮೋಟರ್ಸ್ ಯುಕೆ ಲಾಟರಿಯಲ್ಲಿ ನಿಮ್ಮ ನಂಬರ್‌ಗೆ ₹2.48 ಕೋಟಿ ಬಹುಮಾನ ಬಂದಿದೆ’ ಎಂದು ಹೇಳಿದ್ದ. ಅದು ನಿಜವೆಂದು ನಂಬಿದ್ದ ದೂರುದಾರರು, ಬಹುಮಾನ ಹೇಗೆ ಪಡೆಯುವುದು ಎಂದು ಕೇಳಿದ್ದರು. ‘ನೋಂದಣಿ ಶುಲ್ಕ ಪಾವತಿ ಮಾಡಿದರೆ ಹಣ ವರ್ಗಾವಣೆ ಮಾಡುತ್ತೇವೆ’ ಎಂಬುದಾಗಿ ಆತ ಉತ್ತರಿಸಿದ್ದ ಎಂದು ಪೊಲೀಸರು ಹೇಳಿದರು.

ಆತನ ಮಾತು ನಂಬಿದ್ದ ಭಾನು, ಆರೋಪಿಯ ಎಸ್‌ಬಿಐ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿದ್ದರು. ಅದಾದ ನಂತರ, ಆರೋಪಿ ಸಂಪರ್ಕಕ್ಕೆ ಸಿಕ್ಕಿಲ್ಲ. ಇ–ಮೇಲ್ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲವೆಂದು ದೂರಿನಲ್ಲಿ ಭಾನು ತಿಳಿಸಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !