ಚಾಮರಾಜನಗರ: ಪಟ್ಟಣದ ನಗರಸಭೆ: ಕನಿಷ್ಠ, ಗರಿಷ್ಠ ಅಂತರದ ಗೆಲುವು

7

ಚಾಮರಾಜನಗರ: ಪಟ್ಟಣದ ನಗರಸಭೆ: ಕನಿಷ್ಠ, ಗರಿಷ್ಠ ಅಂತರದ ಗೆಲುವು

Published:
Updated:

ಚಾಮರಾಜನಗರ: ಪಟ್ಟಣದ ನಗರಸಭೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದವರು 15ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪಿ. ನಂಜುಂಡಸ್ವಾಮಿ. ಸಮೀಪದ ಪ್ರತಿಸ್ಪರ್ಧಿಗಿಂತ ಕೇವಲ ಕೇವಲ ನಾಲ್ಕು ಹೆಚ್ಚು ಮತಗಳನ್ನು ಪಡೆದು ಅವರು ಗೆಲುವಿನ ದಡ ಸೇರಿದ್ದಾರೆ. ಅವರಿಗೆ 334 ಮತಗಳು ಬಿದ್ದಿದ್ದವು. ಬಿಜೆಪಿಯ ಎಂ. ಹೇಮಂತ್‌ ಕುಮಾರ್‌ ಅವರು 330 ಮತಗಳನ್ನು ಪಡೆದಿದ್ದರು.

18ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಶಾಂತಿ (532) ಅವರು ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎನ್.ಎಸ್. ದಿವ್ಯಶ್ರೀ ಅವರನ್ನು 12 ಮತಗಳ ಅಂತರದಿಂದ ಸೋಲಿಸಿದ್ದಾರೆ. 

31ನೇ ವಾರ್ಡ್‌ನ ಕಾಂಗ್ರೆಸ್‌ನ ಅಭ್ಯರ್ಥಿ, ನಗರಸಭೆಯ ಹಾಲಿ ಉಪಾಧ್ಯಕ್ಷ ಆರ್.ಎಂ. ರಾಜಪ್ಪ (523) ಹಾಗೂ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ನಂಜುಂಡಸ್ವಾಮಿ ನಡುವಿನ ಗೆಲುವಿನ ಅಂತರ ಕೇವಲ 21 ಮತಗಳು.

30ನೇ ವಾರ್ಡ್‌ನಿಂದ ಗೆದ್ದಿರುವ ಬಿಜೆಪಿಯ ಮಹದೇವಯ್ಯ (551) ಅವರು ಕಾಂಗ್ರೆಸ್‌ನ ಎಂ.ಶಿವಮೂರ್ತಿ ಅವರಿಗಿಂತ 38 ಹೆಚ್ಚು ಮತಗಳನ್ನು ಪಡೆದಿದ್ದಾರೆ.

3ನೇ ವಾರ್ಡ್‌ನಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಮಹಮ್ಮದ್‌ ಅಮೀಖ್‌ (547) ಅವರು ಪಕ್ಷೇತರ ಅಭ್ಯರ್ಥಿ ಬಿ.ಸತೀಶ್ ಅವರನ್ನು 40 ಮತಗಳ ಅಂತರದಲ್ಲಿ ಮಣಿಸಿದ್ದಾರೆ. 

ಗರಿಷ್ಠ ಮತಗಳ ಅಂತರ: ವಾರ್ಡ್ ನಂಬರ್‌ 10ರ ಬಿಜೆಪಿ ಅಭ್ಯರ್ಥಿ ಎಂ.ಮನೋಜ್‌ ಕುಮಾರ್ (994) ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಸ್ವಾಮಿ ಅವರನ್ನು 703 ಮತಗಳಿಂದ ಸೋಲಿಸಿದ್ದಾರೆ. ಇದು ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಪಡೆದ ಅತೀ ಹೆಚ್ಚು ಅಂತರದ ಗೆಲುವು.

ನಂತರದ ಸ್ಥಾನದಲ್ಲಿ 14ನೇ ವಾರ್ಡ್‌ನಿಂದ ಗೆದ್ದಿರುವ ಕಾಂಗ್ರೆಸ್‌ನ ಚಿನ್ನಮ್ಮ ಇದ್ದಾರೆ. 1,075 ಮತಗಳನ್ನು ಪಡೆದಿರುವ ಅವರು ಸಮೀಪದ ಪ್ರತಿಸ್ಪರ್ಧಿ ಎಸ್‌ಡಿಪಿಐನ ಸುಮಾ ಅವರನ್ನು 699 ಮತಗಳ ಅಂತರದಲ್ಲಿ ಮಣಿಸಿದ್ದಾರೆ.

16ನೇ ವಾರ್ಡ್‌ನ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಸ್. ಚಂದ್ರಕಲಾ (1,042) ಅವರು 642 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪುಷ್ಪಮಾಲಾ ಅವರನ್ನು ಸೋಲಿಸಿದ್ದಾರೆ.

28ನೇ ವಾರ್ಡ್‌ನಿಂದ ಗೆದ್ದಿರುವ ಬಿಜೆಪಿಯ ಸುರೇಶ್ (977) ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ರಂಗಸ್ವಾಮಿ ಅವರ ನಡುವಿನ ಗೆಲುವಿನ ಅಂತರ 610 ಮತಗಳು.

7ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿ.ಎಂ. ಆಶಾ (712) ಅವರು ಕಾಂಗ್ರೆಸ್‌ನ ಹೇಮಾ ಗಣೇಶ್ ಅವರನ್ನು 605 ಮತಗಳಿಂದ ಸೋಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !