ಶಿಕ್ಷಕರ ಮೇಲೆ ದಾಳಿ: ಲಖನೌ ವಿಶ್ವವಿದ್ಯಾಲಯ ಬಂದ್

7

ಶಿಕ್ಷಕರ ಮೇಲೆ ದಾಳಿ: ಲಖನೌ ವಿಶ್ವವಿದ್ಯಾಲಯ ಬಂದ್

Published:
Updated:

ಲಖನೌ: ನೂತನ ಶೈಕ್ಷಣಿಕ ವರ್ಷದ ದಾಖಲಾತಿಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಗುಂಪೊಂದು ಶಿಕ್ಷಕರ ಮೇಲೆ ದಾಳಿ ನಡೆಸಿರುವ ಸಂಬಂಧ, ಮುಂದಿನ ಆದೇಶದ ತನಕ ಲಖನೌ ವಿಶ್ವವಿದ್ಯಾಲಯವನ್ನು ಮುಚ್ಚಲಾಗಿದೆ. 

ವಿಶ್ವವಿದ್ಯಾಲಯದ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ.

‘ಪ್ರತಿಭಟನೆ ನಡೆಸಿದವರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲ. ತಾವು ಸಮಾಜವಾದಿ ಪಕ್ಷದವರು ಎಂದು ಅವರು ಹೇಳಿಕೊಂಡರು. 25ರಿಂದ 30 ಜನ ದಾಳಿ ನಡೆಸಿದರು’ ಎಂದು ಕುಲಸಚಿವ ಎಸ್‌.‍‍‍ಪಿ. ಸಿಂಗ್ ಹೇಳಿದ್ದಾರೆ. 

‘ದಾಳಿಯಲ್ಲಿ ಡಜನ್‌ಗೂ ಹೆಚ್ಚು ಶಿಕ್ಷಕರಿಗೆ ಗಾಯಗಳಾಗಿವೆ. ನನ್ನ ಮೇಲೂ ಅವರು ದಾಳಿ ನಡೆಸುತ್ತಿದ್ದರು ಎನಿಸುತ್ತದೆ. ನನ್ನ ಸಹೋದ್ಯೋಗಿಗಳನ್ನು ನನ್ನ ಕಾಪಾಡಿದ್ದರಿಂದ ನಾನು ಕಚೇರಿ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !