ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದವರು ಡಿಕೆಶಿ: ಎಂ.ಬಿ.ಪಾಟೀಲ

ಮಂಗಳವಾರ, ಏಪ್ರಿಲ್ 23, 2019
27 °C
'ನಾ ಗುರುವಲ್ಲ, ಅವ ಶಿಷ್ಯನಲ್ಲ' ಡಿಕೆಶಿ ವಿರುದ್ಧ ಮತ್ತೆ ವಾಗ್ದಾಳಿ

ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಿರ್ನಾಮ ಮಾಡಿದವರು ಡಿಕೆಶಿ: ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ಒಕ್ಕಲಿಗರ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ನಿರ್ನಾಮ ಮಾಡಿದವರು, ತಮ್ಮ ಬಂಡವಾಳ ಅಲ್ಲಿ ಖಾಲಿಯಾದ ಬಳಿಕ ಉತ್ತರ ಕರ್ನಾಟಕಕ್ಕೆ ಬರುತ್ತಿದ್ದಾರೆ’ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಗೃಹ ಸಚಿವ ಎಂ.ಬಿ.ಪಾಟೀಲ ಹರಿಹಾಯ್ದರು.

‘ಇವರ ದರ್ಪದ ನುಡಿ, ಬಾಡಿ ಲಾಂಗ್ವೇಜ್‌ಗೆ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ನಾಶವಾಗಿದೆ. ನಾ ಅವ್ನ ಗುರುವಲ್ಲ. ಅವ ನನ್ನ ಶಿಷ್ಯನಲ್ಲ. ಇಬ್ಬರೂ ಸಹೋದ್ಯೋಗಿಗಳಷ್ಟೇ’ ಎಂದು ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಟೀಲ ಕಿಡಿಕಾರಿದರು.

‘ಐಟಿ ದಾಳಿ ನಡೆದಾಗ ಯಾರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾಯ್ತು ಎಂಬುದು ಜಗಜ್ಜಾಹೀರುಗೊಂಡಿದೆ. ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ನೀಡಿರಬಹುದಲ್ಲಾ? ಒಕ್ಕಲಿಗ ಸಮಾಜದ ಬಗ್ಗೆ ಅಪಾರ ಗೌರವವಿದೆ. ನಾವೇನಾದರೂ ಅವರ ಬಗ್ಗೆ ಮಾತನಾಡಿದ್ದೇವಾ. ಆದರೆ ಆ ಸಮಾಜದಲ್ಲಿ ಹುಟ್ಟಿದ ಇಂಥಹ ಕೆಲ ವ್ಯಕ್ತಿಗಳು ಕಳಂಕವಾಗುತ್ತಿದ್ದಾರೆ’ ಎಂದು ಗೃಹ ಸಚಿವರು ಪರೋಕ್ಷವಾಗಿ ತಮ್ಮ ವಾಗ್ದಾಳಿ ಮುಂದುವರೆಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಮಾತನಾಡದಂತೆ ಕೆಪಿಸಿಸಿ ಇಬ್ಬರಿಗೂ ಸೂಚಿಸಿತ್ತು. ಆದರೆ ಡಿಕೆಶಿ ಪದೇ ಪದೇ ಇದೇ ವಿಷಯ ಕೆದಕುತ್ತಿದ್ದಾರೆ. ಮೊದಲು ತಮ್ಮ ಮನೆ ಶುದ್ಧವಾಗಿಟ್ಟುಕೊಳ್ಳಲಿ. ಈ ಸಂಬಂಧ ದಿನೇಶ್‌ ಗುಂಡೂರಾವ್‌ಗೆ ದೂರು ನೀಡುವೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

ಜೈಲಿಗೋಗಲಿ

‘ಶಾಸಕ ನಡಹಳ್ಳಿ ನನ್ನ ವಿರುದ್ಧ ಮಾಡಿರುವ ಆರೋಪಗಳನ್ನು ಸಾಬೀತು ಮಾಡಲಿ. ಇಲ್ಲವೇ ಜೈಲಿಗೋಗಲು ಸಿದ್ಧವಾಗಿರಲಿ. ಕಾನೂನು ತಜ್ಞರ ಜತೆ ಈ ನಿಟ್ಟಿನಲ್ಲಿ ಚರ್ಚೆ ನಡೆಸಿರುವೆ’ ಎಂದು ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 24

  Happy
 • 3

  Amused
 • 2

  Sad
 • 2

  Frustrated
 • 5

  Angry

Comments:

0 comments

Write the first review for this !