ಜ.18ರಿಂದ ‘ಎಂ ಫೆಸ್ಟ್’ ಸಂಗೀತ ಕಾರ್ಯಕ್ರಮ

7

ಜ.18ರಿಂದ ‘ಎಂ ಫೆಸ್ಟ್’ ಸಂಗೀತ ಕಾರ್ಯಕ್ರಮ

Published:
Updated:
Prajavani

ಮನರಂಜನಾ ಸಂಸ್ಥೆ ಟಾರಿಯನ್, ನಗರದಲ್ಲಿ ಇದೇ ಮೊದಲ ಬಾರಿಗೆ ‘ಎಂ–ಫೆಸ್ಟ್‌’ ಶೀರ್ಷಿಕೆಯಡಿ ದೊಡ್ಡ  ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಜ. 18ರಿಂದ 20ರವರೆಗೆ ಓರಿಯಾನ್ ಮಾಲ್‌ನ ಲೇಕ್ ಸೈಡ್‌ನಲ್ಲಿ ಈ ವಿಶಿಷ್ಟ ಸಂಗೀತೋತ್ಸವ ನಡೆಯಲಿದೆ. 18ರಂದು ಬೆಳಿಗ್ಗೆ 10ಕ್ಕೆ ನಾದಬ್ರಹ್ಮ ಹಂಸಲೇಖ ಎಂಫೆಸ್ಟ್‌ ಸಂಗೀತ ಕಾರ್ಯಕ್ರಮ ಉದ್ಘಾಟಿಸುವರು.

ವಿಶ್ವದ ವಿವಿಧ ಭಾಗದಲ್ಲಿನ ವೈವಿಧ್ಯಮಯ ಸಂಗೀತದ ಸ್ಮರಣೆಗಾಗಿ ಈ ಸಂಗೀತ ಉತ್ಸವ ಆಯೋಜಿಸಲಾಗಿದೆ. ಸಂಗೀತಗೋಷ್ಠಿ, ಸಂಗೀತ ಪ್ರಶಸ್ತಿ, ಸಂಗೀತ ನಿಯತಕಾಲಿಕೆಗಳು ಮತ್ತು ಮ್ಯೂಸಿಖಾನ್ ಈ ಸಂಗೀತ ಉತ್ಸವದ ವಿಶೇಷ ಆಕರ್ಷಣೆ ಎನ್ನುತ್ತಾರೆ ಎಂ–ಫೆಸ್ಟ್‌ನ ರೂವಾರಿ ವಿ.ಕೆ.ಲೋಕೇಶ್. ‘ಬ್ಯಾಟಲ್ ಆಫ್ ಬ್ಯಾಂಡ್ಸ್’ ಅನ್ನು ಜನಪ್ರಿಯ ಬ್ಯಾಂಡ್‌ಗಳಾದ ಪೈನಾಪಲ್ ಎಕ್ಸ್‌ ಪ್ರೆಸ್, ದ ಜೂಕ್ ರೇಡಿಯೊ, ಮೈಸೂರು ಎಕ್ಸ್‌ಪ್ರೆಸ್, ಜಾನಪದ ಲೋಕದ ’ದ ಇಂಡಿಯನ್ ಫೋಕ್ ಬ್ಯಾಂಡ್‌ಗಳು’ ಸಂಗೀತ ಪ್ರೇಮಿಗಳ ಮನತಣಿಸಲಿವೆ. ಜನಪ್ರಿಯ ಸಂಗೀತಗಾರರಾದ ಮಂಜುನಾಥ ಎನ್.ಎಸ್. (ಡ್ರಮ್ಮರ್), ಸಂದೀಪ್ ವಸಿಷ್ಟ (ಕೊಳಲುವಾದಕ), ಚರಣ್ ರಾವ್ (ಗೀಟಾರ್ ವಾದಕ) ಒಳಗೊಂಡಂತೆ  ಅನೇಕ ಖ್ಯಾತನಾಮರು ಮೂರು ದಿನಗಳ ಉತ್ಸವದಲ್ಲಿ ಭಾಗವಹಿಸುವರು. ‘ಉದಯೋನ್ಮುಖ ಸಂಗೀತಗಾರರಿಗೆ ‘ಕಿಮಾ ಅವಾರ್ಡ್ಸ್’ಗಳಿಗೆ ಪೂರಕವಾಗಿ ವಿವಿಧ ವೇದಿಕೆಗಳಲ್ಲಿ ತಮ್ಮ ಸಂಗೀತ ಪ್ರತಿಭೆ ಪ್ರದರ್ಶಿಸಲೂ ಅವಕಾಶವಿದೆ.

‘ಕಿಮಾ ಅವಾರ್ಡ್ಸ್’ ಮತ್ತು ‘ಬ್ಯಾಟಲ್ ಆಫ್ ಬ್ಯಾಂಡ್ಸ್’ನ ಪ್ರಶಸ್ತಿಗೆ ಇದೇ 24 ರಿಂದ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ‌ನೋಂದಣಿಗೆ  90080 08458ಗೆ ಸಂಪರ್ಕಿಸಿ. www.mfestindia.com 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !