‘ಮಡಿವಾಳ ಮಾಚಿದೇವ ಸಮಾಜ ಸುಧಾರಕ’

7

‘ಮಡಿವಾಳ ಮಾಚಿದೇವ ಸಮಾಜ ಸುಧಾರಕ’

Published:
Updated:
Prajavani

ಬೆಂಗಳೂರು: ‘ಮಡಿವಾಳ ಮಾಚಿದೇವ ಶ್ರೇಷ್ಠ ವಚನಕಾರರು. ಅವರು ವಚನಗಳ ಮೂಲಕ ಹಿಂದುಳಿದವರು, ದಲಿತರು ಹಾಗೂ ಮಹಿಳೆಯರು ಮುಖ್ಯವಾಹಿನಿಗೆ ಬರುವಂತೆ ಉತ್ತೇಜಿಸಿದರು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ‌‘ಮಡಿವಾಳ ಮಾಚಿದೇವ ಜಯಂತಿ’ಯಲ್ಲಿ ಅವರು ಮಾತನಾಡಿದರು.

‘ಮಾಚಿದೇವ ಅವರು ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ನೋವುಗಳನ್ನು ವಚನಗಳಲ್ಲಿ ಬಿಚ್ಚಿಟ್ಟರು. ಆ ಮೂಲಕ 12ನೇ ಶತಮಾನದಲ್ಲಿ ಮಹಾನ್ ಸಮಾಜ ಸುಧಾರಕರಾಗಿ ಹೊರಹೊಮ್ಮಿದರು. ಅವರ ವಚನಗಳ ಆಶಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು' ಎಂದು ಅವರು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಚ್‌.ರವಿಕುಮಾರ್‌,‘ಮಡಿವಾಳ ಸಮುದಾಯದವರು ಸಂಘಟಿತರಾಗಲು ಹಿಂದೇಟು ಹಾಕುತ್ತಿದ್ದಾರೆ. ಸಮುದಾಯದ ಏಳಿಗೆ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಎಲ್ಲರೂ ಸಂಘಟಿತರಾದಾಗ ಮಾತ್ರ ಮಾಚಿದೇವರ ಜಯಂತಿಗೆ ಅರ್ಥ ಬರುತ್ತದೆ’ ಎಂದರು.

ಬಾಲಗಾಯಕ ಜ್ಞಾನೇಶ್ ಮತ್ತು ತಂಡದವರು ವಚನ ಗಾಯನ ನಡೆಸಿಕೊಟ್ಟರು. ಮಡಿವಾಳ ಮಾಚಿದೇವರ ಭಾವಚಿತ್ರದೊಂದಿಗೆ ಸ್ವಾತಂತ್ರ್ಯಉದ್ಯಾನದಿಂದ ರವೀಂದ್ರ ಕಲಾಕ್ಷೇತ್ರದ ವರೆಗೆ ಜನಪದ ಕಲಾತಂಡಗಳ ಮೆರವಣಿಗೆ ನಡೆಯಿತು. ಪೂಜಾ ಕುಣಿತ, ತಮಟೆ ವಾದನ, ಪುರವಂತಿಕೆ, ನಗಾರಿ, ಕೋಲಾಟ, ಡೊಳ್ಳು ಕುಣಿತ ನೋಡುಗರ ಗಮನಸೆಳೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !