ಪಾಲಿಕೆ ಸದಸ್ಯನ ಬಂಧನಕ್ಕೆ ಆಗ್ರಹ

7

ಪಾಲಿಕೆ ಸದಸ್ಯನ ಬಂಧನಕ್ಕೆ ಆಗ್ರಹ

Published:
Updated:

ಬೆಂಗಳೂರು: ‘ಬೆಂಗಳೂರು ವಕೀಲರ ಸಂಘದ ಸದಸ್ಯೆ ಕುಮಾರಿ ಧರಣಿ ಸಾವಿಗೆ ಕಾರಣವಾದ ಮಹದೇವಪುರ ಪಾಲಿಕೆ ಸದಸ್ಯ ಸುರೇಶ್ ಮತ್ತು ಆತನ ಸಹವರ್ತಿಗಳನ್ನು ಬಂಧಿಸಬೇಕು’ ಎಂದು ಅಖಿಲ ಭಾರತ ವಕೀಲರ ಒಕ್ಕೂಟ ಆಗ್ರಹಿಸಿದೆ.

‘ಜಾಗದ ವಿವಾದಕ್ಕೆ ಸಂಬಂಧಪಟ್ಟಂತೆ ವಾರ್ಡ್ ಪಾಲಿಕೆ ಸದಸ್ಯ ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಜಾಗ ನೀಡಲಿಲ್ಲ ಎಂಬ ಕಾರಣಕ್ಕೆ ಸಹಚರರನ್ನು ಛೂ ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು’ ಎಂದು ಒಕ್ಕೂಟದ ಸದಸ್ಯ ವಕೀಲ ಹರೀಂದ್ರ ಹೇಳಿದರು.

ಮಹದೇವಪುರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !