ರಾಜಪಕ್ಸೆ ರಾಜೀನಾಮೆ: ನೂತನ ಪ್ರಧಾನಿಯಾಗಿ ರನಿಲ್‌ ವಿಕ್ರಮಸಿಂಘೆ ಇಂದು ಪ್ರಮಾಣವಚನ?

7
ನೂತನ ಪ್ರಧಾನಿಯಾಗಿ ರನಿಲ್‌ ವಿಕ್ರಮಸಿಂಘೆ ಇಂದು ಪ್ರಮಾಣವಚನ?

ರಾಜಪಕ್ಸೆ ರಾಜೀನಾಮೆ: ನೂತನ ಪ್ರಧಾನಿಯಾಗಿ ರನಿಲ್‌ ವಿಕ್ರಮಸಿಂಘೆ ಇಂದು ಪ್ರಮಾಣವಚನ?

Published:
Updated:
Deccan Herald

ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಸ್ಥಾನಕ್ಕೆ ದಿಢೀರನೇ ನೇಮಿಸಿದ್ದ ಮಹಿಂದಾ ರಾಜಪಕ್ಸೆ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನೀಡಿದ ಎರಡು ಕಠಿಣ ತೀರ್ಪುಗಳ ಹಿನ್ನೆಲೆಯಲ್ಲಿ ರಾಜಪಕ್ಸೆ ಈ ನಿರ್ಧಾರ ಕೈಗೊಂಡಿದ್ದಾರೆ. ಪದಚ್ಯುತ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಭಾನುವಾರ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.

ಅಧ್ಯಕ್ಷ ಸಿರಿಸೇನಾ ಅವರು ವಿಕ್ರಮಸಿಂಘೆ ಅವರೊಂದಿಗೆ ಶುಕ್ರವಾರ ದೂರವಾಣಿಯಲ್ಲಿ ಮಾತುಕತೆ ನಡೆಸಿದ ನಂತರ, ಅವರನ್ನು ಪುನಃ ಪ್ರಧಾನಿಯಾಗಿ ನೇಮಕ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

ರಾಜಪಕ್ಸೆ ರಾಜೀನಾಮೆ ನೀಡಿರುವ ಬಗ್ಗೆ ಯುನೈಟೆಡ್‌ ಪೀಪಲ್ಸ್‌ ಫ್ರೀಡಂ ಅಲಯನ್ಸ್‌ (ಯುಪಿಎಫ್‌ಎ) ಪಕ್ಷದ ಸಂಸದರಿಗೂ ಮಾಹಿತಿ ನೀಡಿದ್ದಾರೆ ಎಂದು ಸಂಸದ ಶೆಹನ್‌ ಸೆಮಾಸಿಂಘೆ ವರದಿಗಾರರಿಗೆ ತಿಳಿಸಿದ್ದಾರೆ.

ರನಿಲ್‌ ವಿಕ್ರಮಸಿಂಘೆ ಅವರನ್ನು ಇದೇ  ಅಕ್ಟೋಬರ್‌ 26ರಂದು ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ಸ್ಥಾನದಿಂದ ಪದಚ್ಯುತಗೊಳಿಸಿ, ಅವರ ಸ್ಥಾನಕ್ಕೆ ರಾಜಪಕ್ಸೆ ಅವರನ್ನು ನೇಮಿಸಿದ್ದರು. ಅಧ್ಯಕ್ಷರ ಈ ವಿವಾದಾತ್ಮಕ ನಡೆಯಿಂದ ದೇಶದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿತ್ತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !