ಶೇ 60ರಷ್ಟು ಜನರಿಗೆ ಟ್ರಂಪ್ ಇಷ್ಟವಿಲ್ಲ: ಸಮೀಕ್ಷೆ

7

ಶೇ 60ರಷ್ಟು ಜನರಿಗೆ ಟ್ರಂಪ್ ಇಷ್ಟವಿಲ್ಲ: ಸಮೀಕ್ಷೆ

Published:
Updated:
Prajavani

ವಾಷಿಂಗ್ಟನ್ : 1980ರ ಬಳಿಕ ಜನಿಸಿದ ಅಮೆರಿಕ ನಾಗರಿಕರ (ಮಿಲೇನಿಯಲ್ಸ್) ಪೈಕಿ ಶೇ 60ರಷ್ಟು ಜನರು ಡೊನಾಲ್ಡ್ ಟ್ರಂಪ್ ಅವರನ್ನು ಇಷ್ಟಪಡುವುದಿಲ್ಲ ಎಂದು ಸಮೀಕ್ಷೆಯೊಂದು ತಿಳಿಸಿದೆ.

18 ರಿಂದ 37 ವಯೋಮಾನದ ಒಳಗಿನ ಜನರಿಗೆ ಟ್ರಂಪ್ ಅವರಾಗಲೀ, ಅವರ ಟ್ವಿಟರ್ ಚಟುವಟಿಕೆಗಳಾಗಲೀ ಇಷ್ಟವಾಗಿಲ್ಲ ಎಂದು ಮೆಸಾಚುಸೆಟ್ಟ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಸಮೀಕ್ಷೆ ಅಭಿಪ್ರಾಯಪಟ್ಟಿದೆ. 

ಸಮೀಕ್ಷೆಗೆ ಒಳಪಟ್ಟವರ ಪೈಕಿ ತಾವು ಡೆಮಾಕ್ರಟಿಕ್ ಎಂದು ಶೇ 54ರಷ್ಟು ಜನರು, ತಾವು ರಿಪಬ್ಲಿಕನ್ ಎಂದು ಶೇ 32ರಷ್ಟು, ತಾವು ಸ್ವತಂತ್ರರು ಎಂಬುದಾಗಿ ಶೇ 12ರಷ್ಟು ಹಾಗೂ ಖಚಿತವಿಲ್ಲ ಎಂಬುದಾಗಿ ಶೇ 2ರಷ್ಟು ಜನರು ಹೇಳಿದ್ದಾರೆ. 

ತಾವು ರಿಪಬ್ಲಿಕನ್ ಎಂದು ಹೇಳಿಕೊಂಡವರ ಪೈಕಿ ಶೇ 80ರಷ್ಟು ಜನರು ಅಧ್ಯಕ್ಷರಾಗಿ ಟ್ರಂಪ್ ಅವರನ್ನು ಒಪ್ಪುತ್ತೇವೆ ಎಂದು ಹೇಳಿದ್ದಾರೆ. ಶೇ 40ರಷ್ಟು ಮಂದಿ, ಟ್ರಂಪ್ ಅವರು ಅತಿಹೆಚ್ಚು ಟ್ವೀಟ್ ಮಾಡುತ್ತಾರೆ ಎಂದು ಆಕ್ಷೇಪಿಸಿದ್ದಾರೆ. 

–––

1,000 ಸಮೀಕ್ಷೆಗೆ ಒಳಪಟ್ಟ ಜನ

37% ಟ್ರಂಪ್ ಪರ ಒಲವು ಹೊಂದಿದವರು

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !