ಸೋಮವಾರ, ಅಕ್ಟೋಬರ್ 21, 2019
25 °C

‘ದಳಪತಿ’ ವಿಜಯ್‌ ಜತೆ ಮಾಳವಿಕಾ

Published:
Updated:

‘ಪೆಟ್ಟಾ’ ಸಿನಿಮಾ ಖ್ಯಾತಿಯ ನಟಿ ಮಾಳವಿಕಾ ಮೋಹನನ್‌ ಅವರು ವಿಜಯ್‌ ಅಭಿನಯದ ‘ದಳಪತಿ 64’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಲೋಕೇಶ್‌ ಕನಕರಾಜ್‌ ಅವರು ನಿರ್ದೇಶಿಸುತ್ತಿದ್ದು, ವಿಜಯ್‌ ಸೇತುಪತಿ ಅವರು ಈ ಚಿತ್ರದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವು ಅತಿ ಶೀಘ್ರದಲ್ಲಿ ಸೆಟ್ಟೇರಲಿದೆ.

‘ವಿಜಯ್‌ ಅವರಿಗೆ ದೊಡ್ಡ ಅಭಿಮಾನಿ ವರ್ಗ ಇದೆ. ಇಂತಹ ದೊಡ್ಡ ಚಿತ್ರದಲ್ಲಿ ಭಾಗವಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ವಿಜಯ್‌ ಅವರ ದೊಡ್ಡ ಅಭಿಮಾನಿ ನಾನು. ಅವರ ಜೊತೆ ನಟಿಸುತ್ತೇನೆ ಎಂದೂ ಯಾವತ್ತೂ ಅಂದುಕೊಂಡಿರಲಿಲ್ಲ. ನಾನು ಲೋಕೇಶ್‌ ನಿರ್ದೇಶನದ  ಚಿತ್ರಗಳನ್ನು ನೋಡಿದ್ದೇನೆ. ಚಿತ್ರದ ಶೂಟಿಂಗ್‌ ಆರಂಭವಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಮಾಳವಿಕಾ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾಳವಿಕಾ ‘ದಳಪತಿ 64’ ಚಿತ್ರದಲ್ಲಿ ನಟಿಸುತ್ತಿರುವುದನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲೂ ಹಂಚಿಕೊಂಡಿದ್ದು, ತಮ್ಮ ಫೋಟೊ ಇರುವ  ಚಿತ್ರದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಅವರು ಎಲ್ಲೂ ಬಾಯಿಬಿಟ್ಟಿಲ್ಲ. ಆದರೆ ‘ಆಸಕ್ತಿಕರ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಇಲ್ಲಿಯವರೆಗೂ ಅಂತಹ ವಿಭಿನ್ನ ಪಾತ್ರವನ್ನು ನಾನು ಮಾಡಿಲ್ಲ’ ಎಂದು ಹೇಳಿ ಕುತೂಹಲ ಕೆರಳಿಸಿದ್ದಾರೆ.

ಈ ಚಿತ್ರದ ಕತೆಯೇ ವಿಭಿನ್ನವಾಗಿದೆ. ವಿಜಯ್‌ ಹಾಗೂ ವಿಜಯ್‌ ಸೇತುಪತಿ ಅವರು ಟಾಮ್‌ ಹಾಗೂ ಜೆರಿಯಂತಹ ಪಾತ್ರ ಮಾಡಲಿದ್ದಾರೆ. ಇದು ಕಮರ್ಷಿಯಲ್‌ ಎಂಟರ್‌ಟೇನ್‌ಮೆಂಟ್‌ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ದಳಪತಿ ವಿಜಯ್‌ ಸಿನಿಮಾದಲ್ಲಿ ಸೇತುಪತಿ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)