ಮಲೇಷ್ಯಾ: ಮರಣ ದಂಡನೆ ರದ್ದತಿಗೆ ನಿರ್ಣಯ

7

ಮಲೇಷ್ಯಾ: ಮರಣ ದಂಡನೆ ರದ್ದತಿಗೆ ನಿರ್ಣಯ

Published:
Updated:

ಕೌಲಾಲಂಪುರ: ಮರಣ ದಂಡನೆ ಶಿಕ್ಷೆ ರದ್ದುಪಡಿಸಲು ಮಲೇಷ್ಯಾ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಸಂವಹನ ಮತ್ತು ಮಲ್ಟಿಮೀಡಿಯಾ ಸಚಿವ ಗೋವಿಂದ್ ಸಿಂಗ್ ದಿಯೊ ತಿಳಿಸಿದ್ದಾರೆ. 

‘ಶೀಘ್ರವೇ ಕಾನೂನು ತಿದ್ದುಪಡಿ ಆಗುವ ಭರವಸೆ ಇದೆ’ ಎಂದು ಅವರು ಹೇಳಿದ್ದಾರೆ. ಸಂಸತ್ತಿ ನಿರ್ಣಯವನ್ನು ಮಾನವ ಹಕ್ಕುಗಳ ಸಂಘಟನೆ  ಸ್ವಾಗತಿಸಿದೆ. 

ಪ್ರಸ್ತುತ ಮಲೇಷ್ಯಾದಲ್ಲಿ ಹತ್ಯೆ, ಅಪಹರಣ, ಶಸ್ತ್ರಾಸ್ತ್ರ ಸಂಗ್ರಹ, ಮಾದಕ ವಸ್ತುಗಳ ಸಾಗಣೆ ಸೇರಿದಂತೆ ಕೆಲವು ಅಪರಾಧಗಳಿಗೆ ಮರಣ ದಂಡನೆ ಕಡ್ಡಾಯವಾಗಿದೆ. ಬ್ರಿಟಿಷ್ ವಸಾಹತುಶಾಹಿ ಪದ್ಧತಿ ಅನುಸಾರ ನೇಣಿಗೇರಿಸುವ ಮೂಲಕವೇ ಮರಣ ದಂಡನೆ ಜಾರಿಗೊಳಿಸಲಾಗುತ್ತದೆ. 

ಆದರೆ ಈ ಪದ್ಧತಿಗೆ ದೇಶದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿತ್ತು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !