ಸಂಕಷ್ಟಕ್ಕೆ ಸಿಲುಕಿದ ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ

7
ಅಕ್ರಮ ಹಣ ವರ್ಗಾವಣೆ ಆರೋಪ

ಸಂಕಷ್ಟಕ್ಕೆ ಸಿಲುಕಿದ ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ

Published:
Updated:
Prajavani

ಮಾಲೆ, ಮಾಲ್ಡೀವ್ಸ್‌: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ ಇಲ್ಲಿನ ಮಾಜಿ ಅಧ್ಯಕ್ಷ ಯಮೀನ್‌ ಅಬ್ದುಲ್‌ ಗಯೂಮ್‌ ಹಾಗೂ ಮಾಜಿ ಕಾನೂನು ಸಚಿವ ಅಝಿಮಾ ಶಾಕೂರ್‌  ಅವರು ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಇಬ್ಬರು ಕೂಡ ತನಿಖಾಧಿಕಾರಿಗಳ ಮುಂದೆ ತಪ್ಪು ಮಾಹಿತಿ ನೀಡಿದ್ದು, ಅವರ ವಿರುದ್ಧ ದೋಷಾರೋಪ ಹೊರಿಸಿ ಪ್ರಕರಣ ದಾಖಲಿಸಬೇಕು’ ಎಂದು ಪ್ರಾಸಿಕ್ಯೂಟರ್‌ ಜನರಲ್‌ ಮುಂದೆ ಪೊಲೀಸರು ಮನವಿ ಮಾಡಿದ್ದಾರೆ.

ಯಮೀನ್‌ ಅಧ್ಯಕ್ಷರಾಗಿದ್ದ ವೇಳೆ ಪ್ರವಾಸಿ ರೆಸಾರ್ಟ್‌ ಅಭಿವೃದ್ಧಿಪಡಿಸುವ ವಿಚಾರದಲ್ಲಿ ದ್ವೀಪವೊಂದನ್ನು ಗುತ್ತಿಗೆ ನೀಡಿದ್ದ ವಿಚಾರದಲ್ಲಿ ಅಕ್ರಮ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಯಮೀನ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಲಂಚ ನೀಡಲಾಗಿತ್ತು ಎಂಬ ಆರೋಪ ಕೂಡ ಕೇಳಿಬಂದಿತ್ತು. ತನಿಖೆ ವೇಳೆ ಯಮೀನ್‌ ಅವರಿಗೆ ಸೇರಿದ ಬ್ಯಾಂಕ್‌ ಖಾತೆಯಲ್ಲಿ ₹7.13 ಕೋಟಿ ಹಣ (1 ಮಿಲಿಯನ್‌ ಡಾಲರ್‌) ಪತ್ತೆಯಾಗಿತ್ತು.

ಕಳೆದ ವರ್ಷ ಮಾಲ್ಡೀವ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಮೀನ್‌ ಅವರು ಪರಾಭವಗೊಂಡಿದ್ದರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !