ಮಹದೇಶ್ವರ ಬೆಟ್ಟ: ₹1.32 ಕೋಟಿ ಸಂಗ್ರಹ

7

ಮಹದೇಶ್ವರ ಬೆಟ್ಟ: ₹1.32 ಕೋಟಿ ಸಂಗ್ರಹ

Published:
Updated:
Deccan Herald

ಮಹದೇಶ್ವರ ಬೆಟ್ಟ: ಇಲ್ಲಿ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ದಾಖಲೆ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ.

ಇಲ್ಲಿನ ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ಏಣಿಕೆ ಕಾರ್ಯ ನಡೆಯಿತು. 33 ದಿನಗಳಲ್ಲಿ ₹1.33 ಕೋಟಿ ಹಾಗೂ 45 ಗ್ರಾಂ ಚಿನ್ನ, 1.05 ಗ್ರಾಂ ಬೆಳ್ಳಿ ಆಭರಣಗಳು ಸಂಗ್ರಹಗೊಂಡಿವೆ.

ಆಯುಧ ಪೂಜೆ ಹಾಗೂ ಅಮಾವಾಸ್ಯೆ ಪ್ರಯುಕ್ತ ನಡೆದ ವಿಶೇಷ ಪೂಜೆಗೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಸಾಲೂರು ಮಠದ ಗುರುಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಉಪ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರಮೂರ್ತಿ, ಮಾದರಾಜು, ಬಸವರಾಜು, ಮಲೆ ಮಹದೇಶ್ವರ ಬೆಟ್ಟದ ಎಸ್‌ಬಿಐ ವ್ಯವಸ್ಥಾಪಕ ಸೆಂದಿಲ್ ನಾಥನ್, ಮಲೆಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಬಿ.ಮಹೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !