ಮಲ್ಲೇಶ್ವರದ ಶ್ರೀಕಂಠೇಶ್ವರ ದೇಗುಲದಲ್ಲಿ ಶಿವರಾತ್ರಿ

ಸೋಮವಾರ, ಮಾರ್ಚ್ 25, 2019
33 °C

ಮಲ್ಲೇಶ್ವರದ ಶ್ರೀಕಂಠೇಶ್ವರ ದೇಗುಲದಲ್ಲಿ ಶಿವರಾತ್ರಿ

Published:
Updated:
Prajavani

ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇಗುಲದ ಆವರಣದಲ್ಲಿನ ಶ್ರೀಕಂಠೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಕಾರ್ಯಕ್ರಮ ಆಯೋಜನಗೊಂಡಿದೆ.

ಮಲ್ಲೇಶ್ವರದ ಆರ್ಯವೈಶ್ಯ ಸಂಘ ಶಿವರಾತ್ರಿ ಪ್ರಯುಕ್ತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ‘ನಗರ ಪ್ರದೇಶದಲ್ಲಿ ಶಿವನ ಆರಾಧಕರು ಇದ್ದು, ಅವರಿಗೆ ಅನುಕೂಲವಾಗಲೆಂದು ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ವಾಸವಿ ಯುವಜನ ಸಂಘದ ನಿರ್ದೇಶಕ ನಾಗ ಶರಣ್ ಮಾಹಿತಿ ನೀಡಿದ್ದಾರೆ.

ಹಬ್ಬದಂದು ಬೆಳಿಗ್ಗೆಯಿಂದ ರಾತ್ರಿಯಿಡಿ ಪ್ರಸಾದ ವ್ಯವಸ್ಥೆಯಿದೆ. ಶ್ರೀಕಂಠೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಸಂಜೆ 5ಕ್ಕೆ, ರಾತ್ರಿ 10ಕ್ಕೆ, ಮಧ್ಯರಾತ್ರಿ 11ಕ್ಕೆ ಹಾಗೂ ಮರುದಿನ ಬೆಳಿಗ್ಗೆ 4ಕ್ಕೆ ಪೂಜಾ ಕಾರ್ಯಕ್ರಮ ಜರುಗಲಿದೆ.

ಪ್ರತಿವರ್ಷದಂತೆ ಈ ವರ್ಷ ದೇಗುಲದ ಆವರಣದಲ್ಲಿ ಲೇಪಾಕ್ಷಿ ನಾಗಲಿಂಗೇಶ್ವರ ಸುಜ್ಞಾನ ಶಿವನ ದರ್ಶನದ ವ್ಯವಸ್ಥೆ ಇದೆ. ಲೇಪಾಕ್ಷಿಯಲ್ಲಿರುವಂತೆಯೇ ನಾಗಲಿಂಗೇಶ್ವರನ ಮೂರ್ತಿಯನ್ನು ದೇಗುಲದಲ್ಲಿ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿದ್ದು, ಅಲ್ಲೇ ರಾತ್ರಿಯಿಡಿ ಜಾಗರಣೆಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ವರ್ಷ ‘ಲೈಟ್ ಅಂಡ್‌ ಮ್ಯೂಸಿಕ್ ಶೋ’ ಆಯೋಜಿಸಲಾಗಿದ್ದು, ಅದರಲ್ಲಿ ಗಣೇಶ, ಸುಬ್ರಮಣ್ಯಸ್ವಾಮಿ, ಶಿವ ಹಾಗೂ ಪಾರ್ವತಿ ಮೂರ್ತಿಗಳಿದ್ದು, ಅಲ್ಲಿಯೂ ವಿಶೇಷ ಪೂಜೆಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !