ಮಲ್ಯ ಹೆಸರಿನಲ್ಲಿ ಬ್ರಿಟನ್‌ನಲ್ಲಿ ಆಸ್ತಿಯೇ ಇಲ್ಲ

7

ಮಲ್ಯ ಹೆಸರಿನಲ್ಲಿ ಬ್ರಿಟನ್‌ನಲ್ಲಿ ಆಸ್ತಿಯೇ ಇಲ್ಲ

Published:
Updated:
ವಿಜಯ ಮಲ್ಯ

ಸಿಲ್ವರ್‌ಸ್ಟೋನ್‌ (ಇಂಗ್ಲೆಂಡ್‌): ಬ್ರಿಟನ್‌ನಲ್ಲಿರುವ ತಮ್ಮ ಆಸ್ತಿಗಳ ಮುಟ್ಟುಗೋಲು ಆದೇಶ ಜಾರಿಗೆ ಸಹಕರಿಸುವುದಾಗಿ ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ. ಆದರೆ, ಅಧಿಕಾರಿಗಳಿಗೆ ಹೆಚ್ಚೇನೂ ಸಿಗದು, ಯಾಕೆಂದರೆ ತಮ್ಮ ಕುಟುಂಬದ ಸುಪರ್ದಿಯಲ್ಲಿರುವ ಐಷಾರಾಮಿ ಬಂಗಲೆಗಳು ತಮ್ಮ ಹೆಸರಿನಲ್ಲಿ ಇಲ್ಲ ಎಂದಿದ್ದಾರೆ. 

ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ವಿವಿಧ ಬ್ಯಾಂಕುಗಳಿಂದ ₹9,000 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪ ಮಲ್ಯ ಅವರ ಮೇಲಿದೆ. ಭಾರತದಿಂದ ಬ್ರಿಟನ್‌ಗೆ ಪರಾರಿಯಾಗಿರುವ ಅವರನ್ನು ವಾಪಸ್‌ ಕರೆತರಲು ಭಾರತ ಪ್ರಯತ್ತಿಸುತ್ತಿದೆ.

ಇದಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಬ್ರಿಟನ್‌ನ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ. ಸಾಕ್ಷಿಗಳ ಹೇಳಿಕೆ ದಾಖಲಿಸುವುದು ಈ ತಿಂಗಳ ಕೊನೆಯ ಹೊತ್ತಿಗೆ ಪೂರ್ಣಗೊಳ್ಳಲಿದೆ. ಸೆಪ್ಟೆಂಬರ್‌ನಲ್ಲಿ ತೀರ್ಪು ಪ್ರಕಟವಾಗಬಹುದು. 

‘ಬ್ರಿಟನ್‌ನಲ್ಲಿ ನನ್ನ ಹೆಸರಿನಲ್ಲಿ ಇರುವ ಆಸ್ತಿಗಳನ್ನು ನಾನೇ ಒಯ್ದು ತನಿಖಾಧಿಕಾರಿಗಳಿಗೆ ಒಪ್ಪಿಸುತ್ತೇನೆ. ಅದಕ್ಕಾಗಿ ಅಧಿಕಾರಿಗಳು ನನ್ನ ಮನೆಗೆ ಬರಬೇಕಿಲ್ಲ. ಕೆಲವು ಕಾರುಗಳು ಮತ್ತು ಆಭರಣ ಮಾತ್ರ ನನ್ನ ಹೆಸರಿನಲ್ಲಿರುವ ಆಸ್ತಿ’ ಎಂದು ಮಲ್ಯ ಹೇಳಿದ್ದಾರೆ.

ಲಂಡನ್‌ನ ಹೊರಭಾಗದಲ್ಲಿರುವ ಬಂಗಲೆ ಮಕ್ಕಳ ಹೆಸರಿನಲ್ಲಿದೆ. ಲಂಡನ್‌ನಲ್ಲಿರುವ ಮನೆ ತಾಯಿಯ ಹೆಸರಿನಲ್ಲಿದೆ. ಹಾಗಾಗಿ ಅಧಿಕಾರಿಗಳು ಅವುಗಳನ್ನು ಮುಟ್ಟಲಾಗದು ಎಂದು ಮಲ್ಯ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !