ಬಿಜೆಪಿ ಉಗ್ರಗಾಮಿ ಸಂಘಟನೆ: ಮಮತಾ

7
ಧರ್ಮದ ಆಧಾರದ ಮೇಲೆ ಜನರ ವಿಭಜನೆ: ಟೀಕೆ

ಬಿಜೆಪಿ ಉಗ್ರಗಾಮಿ ಸಂಘಟನೆ: ಮಮತಾ

Published:
Updated:

ಕೋಲ್ಕತ್ತ: ಬಿಜೆಪಿಯನ್ನು ಉಗ್ರಗಾಮಿ ಸಂಘಟನೆ ಎಂದು ಕಟುವಾಗಿ ಟೀಕಿಸಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜನೆ ಮಾಡುವ ಕೆಲಸವನ್ನು ಅದು ಮಾಡುತ್ತಿದೆ ಎಂದರು.

ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ತನ್ನ ಮತಪ್ರಮಾಣ ಹೆಚ್ಚಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಮೇ ತಿಂಗಳಲ್ಲಿ ನಡೆದ ವಿಧಾನಸಭೆಯ ಒಂದು ಉಪಚುನಾವಣೆಯಲ್ಲಿ ಶೇ30ರಷ್ಟು ಇವಿಎಂಗಳು ಕೆಲಸ ಮಾಡಿಲ್ಲ. ಮುಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇದನ್ನೇ ಮಾಡಲಿದ್ದು, ಪಕ್ಷದ ಕಾರ್ಯಕರ್ತರು ಕಣ್ಣಿಡಬೇಕು ಎಂದಿದ್ದಾರೆ.

ಗುರುವಾರ ನಡೆದ ಪಕ್ಷದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನಾವು ಬಿಜೆಪಿಯಂತಹ ಉಗ್ರಗಾಮಿ ಸಂಘಟನೆ ಅಲ್ಲ. ಅವರು ಅಹಂಕಾರ ಹಾಗೂ ಅಸಹಿಷ್ಣುತಾವಾದಿಗಳು. ಅವರು ಧಾರ್ಮಿಕವಾಗಿ ಪಕ್ಷ‍ಪಾತಿಗಳು ಎಂದು ಟೀಕಿಸಿದರು.

ದೆಹಲಿಯಲ್ಲಿ ಅಧಿಕಾರದಲ್ಲಿರುವ ಕಾರಣ ಬಿಜೆಪಿ ನಮಗೆ ಕೊಲೆ ಬೆದರಿಕೆ ಹಾಕುತ್ತಿದೆ ನಮ್ಮ ಬಳಿ ಬರುವ ಧೈರ್ಯವನ್ನು ಅವರು ಮಾಡಿ ನೋಡಲಿ. ಅವರಿಗೆ ಸೂಕ್ತವಾದ ಜಾಗ ತೋರಿಸುತ್ತೇನೆ’ ಎಂದು ಗುಡುಗಿದರು.

ಮಂಗಳವಾರ ಮಾತನಾಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಜೋಷಿ, ‘ನಮ್ಮ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ದಾಳಿ ನಡೆಸಿದರೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಎಂದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !