ಪತ್ನಿ ಕೊಂದು ಕಾರ್ಮಿಕ ಪರಾರಿ

7
ಕೊಲೆ ಪ್ರಕರಣ

ಪತ್ನಿ ಕೊಂದು ಕಾರ್ಮಿಕ ಪರಾರಿ

Published:
Updated:

ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪದ ಕಾವೇರಿಪುರದಲ್ಲಿ ಕೈಲಾಶ್‌ಚಂದ್ರ ಎಂಬಾತ ಪತ್ನಿ ಮಾಲತಿ ಸಾಹು (23) ಅವರನ್ನು ಕೊಲೆ ಮಾಡಿದ್ದಾನೆ.

ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ಈ ಘಟನೆ ನಡೆದಿದ್ದು, ಹತ್ಯೆ ಬಳಿಕ ಆರೋಪಿ ಹೊರಗಿನಿಂದ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾನೆ. ಸಂಜೆಯಾದರೂ ಮಾಲತಿ ಹೊರಗೆ ಬಾರದಿದ್ದಾಗ, ನೆರೆಮನೆಯ ಮಹಿಳೆ ಬಾಗಿಲು ತೆಗೆದು ಒಳ ಹೋದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

2010ರಲ್ಲಿ ನಗರಕ್ಕೆ ಬಂದು ಕೂಲಿ ಕೆಲಸ ಮಾಡುತ್ತಿದ್ದ ಒಡಿಶಾದ ಕೈಲಾಶ್, ತನ್ನೂರಿನವರೇ ಆದ ಮಾಲತಿ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದ್ದು, ಒಡಿಶಾದಲ್ಲಿರುವ ಅಜ್ಜಿಯ ಮನೆಯಲ್ಲಿದೆ. ದಂಪತಿ ಕೆಲ ದಿನಗಳಿಂದ ಕಾಮಾಕ್ಷಿಪಾಳ್ಯದ ಸೊಳ್ಳೆ ಪರದೆ ತಯಾರಿಕಾ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು. ಕಾರ್ಖಾನೆ ಮಾಲೀಕರೇ ಕಾವೇರಿಪುರದಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು.

ಇತ್ತೀಚೆಗೆ ದಂಪತಿ ನಡುವೆ ಮನಸ್ತಾಪ ಶುರುವಾಗಿ ನಿತ್ಯವೂ ಮನೆಯಲ್ಲಿ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅಂತೆಯೇ ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಗಳ ಮಾಡಿಕೊಂಡಿದ್ದಾರೆ. ಈ ಹಂತದಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದಿರುವ ಆರೋಪಿ, ಬಳಿಕ ದೇಹದ ಮೇಲೆ ಬೆಡ್‌ಶೀಟ್ ಹೊದಿಸಿ ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !