ರಸ್ತೆಯಲ್ಲಿ ಯುವತಿ ಬಟ್ಟೆ ಹರಿದವನಿಗೆ ಹಿಗ್ಗಾಮುಗ್ಗಾ ಥಳಿತ

7
ಸಹೋದ್ಯೋಗಿ ಯುವತಿಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಆರೋಪಿ

ರಸ್ತೆಯಲ್ಲಿ ಯುವತಿ ಬಟ್ಟೆ ಹರಿದವನಿಗೆ ಹಿಗ್ಗಾಮುಗ್ಗಾ ಥಳಿತ

Published:
Updated:

ಬೆಂಗಳೂರು: ಮಹಿಳಾ ಸಹೋದ್ಯೋಗಿಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಲ್ಲದೆ, ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ನಡುರಸ್ತೆಯಲ್ಲೇ ಸಹೋದ್ಯೋಗಿ ಯುವತಿಯ ಬಟ್ಟೆ ಹರಿದು ಎಳೆದಾಡಿದ್ದ ಆರೋಪದ ಮೇಲೆ ಅರುಣ್ ಎಂಬಾತನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಆತನ ವಿರುದ್ಧ 26 ವರ್ಷದ ಯುವತಿ ಶನಿವಾರ ದೂರು ಕೊಟ್ಟಿದ್ದಾರೆ. ‘ನಾನು ಚಂದ್ರಾಲೇಔಟ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತೇನೆ. ಅರುಣ್ ಸಹ ಎರಡು ತಿಂಗಳ ಹಿಂದೆ ನಮ್ಮ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದ. ಆತನ ಮೊಬೈಲ್ ಸಂಖ್ಯೆಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದೆವು. 15 ದಿನದಲ್ಲೇ ಉದ್ಯೋಗ ತೊರೆದ ಅರುಣ್, ಗ್ರೂಪ್‌ನಲ್ಲಿದ್ದ ಮಹಿಳಾ ಸಹೋದ್ಯೋಗಿಗಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದ’ ಎಂದು ಅವರು ಆರೋಪಿಸಿದ್ದಾರೆ.

‘ಈ ಕಾರಣದಿಂದ ಸಹೋದ್ಯೋಗಿಗಳೆಲ್ಲ ಒಮ್ಮೆ ಆತನನ್ನು ಭೇಟಿಯಾಗಿದ್ದೆವು. ಮುಜುಗರ ತರುವಂಥ ಸಂದೇಶಗಳನ್ನು ಕಳುಹಿಸಿದರೆ ಪೊಲೀಸರಿಗೆ ದೂರು ಕೊಡುವುದಾಗಿಯೂ ಎಚ್ಚರಿಸಿದ್ದೆವು. ಆ ನಂತರ ಸುಮ್ಮನಾಗಿದ್ದ ಆತ, ಕೆಲ ದಿನಗಳಿಂದ ಬೈಕ್‌ನಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಸಂಜ್ಞೆಗಳನ್ನು ಮಾಡುವ ಮೂಲಕ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದಾನೆ.’

‘ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಮೂವರು ಸಹೋದ್ಯೋಗಿಗಳ ಜತೆ ಬಸ್ ನಿಲ್ದಾಣದ ಕಡೆಗೆ ನಡೆದು ಹೋಗುತ್ತಿದ್ದೆ. ಆಗ ಬೈಕ್‌ನಲ್ಲಿ ಬಂದ ಅರುಣ್, ‘ಏನೇ.. ನನ್ನನ್ನು ಮದುವೆ ಮಾಡಿಕೊಳ್ತೀಯಾ. ನೀನು ನನಗೆ ಬೇಕೇ ಬೇಕು ಕಣೆ’ ಎಂದ. ನಡುರಸ್ತೆಯಲ್ಲಿ ಹಾಗೆ ಹೇಳಿದ್ದರಿಂದ ಕೋಪಗೊಂಡು ಆತನ ವಿರುದ್ಧ ಕೂಗಾಡಿದೆ.’

‘ಸಹೋದ್ಯೋಗಿ ಯುವತಿಯರು ಸಹ ನನ್ನ ನೆರವಿಗೆ ಬಂದರು. ಆಗ ಎಲ್ಲರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆತ, ‘ನನ್ನನ್ನೇ ಎದುರು ಹಾಕಿಕೊಳ್ಳುತ್ತೀರಾ. ಈಕೆಯನ್ನು ಎತ್ತಿ ಹಾಕಿಕೊಂಡು ಹೋಗುತ್ತೇನೆ. ಅದ್ಯಾರು ಅಡ್ಡ ಬರ್ತೀರಾ ನೋಡೋಣ’ ಎನ್ನುತ್ತ ನನ್ನ ಕೈ ಹಿಡಿದು ಎಳೆದಾಡಿದ. ನಾನು ಪ್ರತಿರೋಧ ತೋರಿದಾಗ ಬಟ್ಟೆ ಹರಿದು ಅವಮಾನಿಸಿದ’ ಎಂದು ಸಂತ್ರಸ್ತೆ ದೂರಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !