ಪೊಲೀಸರನ್ನೇ ಅಪಹರಣಕಾರರೆಂದ ಆರೋಪಿ: ಬಂಧನ

7

ಪೊಲೀಸರನ್ನೇ ಅಪಹರಣಕಾರರೆಂದ ಆರೋಪಿ: ಬಂಧನ

Published:
Updated:

ಜೋಧಪುರ: ಪ್ರಕರಣವೊಂದರ ವಿಚಾರಣೆಗೆಂದು ಬಂದಿದ್ದ ನಾಲ್ವರು ಪೊಲೀಸರನ್ನೇ ಅಪಹರಣಕಾರರೆಂದು ಹೇಳಿ ನಾಟಕವಾಡಿದ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ದಿನೇಶ್‌ ಸುತಾರ ಬಂಧಿತ ಆರೋಪಿ. ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಎಐ 645 ಏರ್‌ ಇಂಡಿಯಾ ವಿಮಾನದಲ್ಲಿ ನಡೆದ ನಾಟಕೀಯ ಬೆಳವಣಿಗೆ ಪ್ರಯಾಣಿಕರ ಆತಂಕಕ್ಕೆ ಕಾರಣವಾಯಿತು.

ಮೈಸೂರಿನಲ್ಲಿ ಬಾಲಕನೊಬ್ಬನ ಅಪಹರಣವಾಗಿತ್ತು. ಇದನ್ನು ನೆಪ ಮಾಡಿಕೊಂಡ ಆರೋಪಿ ಬಾಲಕ ನನ್ನ ಜೊತೆಗಿದ್ದಾನೆ. ಹಣ ನೀಡಿದರೆ ಬಿಡುಗಡೆ ಮಾಡುವುದಾಗಿ ಬೇಡಿಕೆ ಇರಿಸಿದ್ದ. ಬಾಲಕನ ಪೋಷಕರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರ ಜೊತೆಗೆ ಜೋಧಪುರಕ್ಕೆ ತೆರಳಿದ್ದಾರೆ.

ವಿಮಾನದಲ್ಲಿ ತೆರಳುವಾಗ ಭಯಗೊಂಡ ಆರೋಪಿ, ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಜೊತೆಗಿದ್ದ ಪೊಲೀಸರು ನನ್ನನ್ನು ಅಪಹರಿಸಿದ್ದಾರೆ ಎಂದು ಕಥೆ ಹೆಣೆದಿದ್ದಾನೆ. ಸಿಬ್ಬಂದಿ ಈ ವಿಷಯವನ್ನು ವಿಮಾನಯಾನ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.

‘ಜೋಧಪುರದಲ್ಲಿ ವಿಮಾನ ಇಳಿಯುತ್ತಿದ್ದಂತೆ ಐವರನ್ನು ವಶಕ್ಕೆ ಪಡೆಯಲಾಯಿತು. ಆರೋಪಿಯನ್ನು ಬಂಧಿಸಿದ್ದು, ಕರ್ನಾಟಕ ಪೊಲೀಸರನ್ನು ಬಿಡುಗಡೆ ಮಾಡಲಾಗಿದೆ’ ಎಂದು ಡಿಸಿಪಿ ಅಮನ್‌ದೀಪ್ ಸಿಂಗ್ ತಿಳಿಸಿದ್ದಾರೆ. 

ವಿಮಾನ ಇಳಿದರೂ, ಎರಡು ಗಂಟೆ ಪ್ರಯಾಣಿಕರನ್ನು ನಿಲ್ದಾಣದ ಹೊರಗೆ ಹೋಗಲು ಅವಕಾಶ ನೀಡಲಿಲ್ಲ. ಅಪಹರಣವಾದ ಬಾಲಕನ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಪ್ರಕರಣದ ತನಿಖೆ ನಡೆಯುತ್ತಿದೆ. 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !