ಕಾಂಗ್ರೆಸ್‌ ವಕ್ತಾರೆ ಪುತ್ರಿಗೆ ಅತ್ಯಾಚಾರ ಬೆದರಿಕೆ: ವ್ಯಕ್ತಿ ಬಂಧನ

7

ಕಾಂಗ್ರೆಸ್‌ ವಕ್ತಾರೆ ಪುತ್ರಿಗೆ ಅತ್ಯಾಚಾರ ಬೆದರಿಕೆ: ವ್ಯಕ್ತಿ ಬಂಧನ

Published:
Updated:

ಅಹ್ಮದಾಬಾದ್/ಮುಂಬೈ: ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಚತುರ್ವೇದಿ ಅವರ 10 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗುವುದಾಗಿ ಟ್ವಿಟರ್‌ನಲ್ಲಿ ಬೆದರಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಹ್ಮದಾಬಾದ್‌ನ ಬಾವಲಾದಿಂದ ಗಿರೀಶ್ ಮಹೇಶ್ವರಿಯನ್ನು (36) ಬುಧವಾರ ರಾತ್ರಿ ಬಂಧಿಸಲಾಗಿದ್ದು, ಆತನನ್ನು ಮುಂಬೈನ ದಿಂಡೋಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

ಬೆದರಿಕೆ ಕುರಿತು ಪ್ರಿಯಾಂಕ ಅವರು ದೂರು ದಾಖಲಿಸಿದ್ದರು. 

ಕೇಂದ್ರ ಗೃಹಸಚಿವಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಟ್ವಿಟರ್ ಬಳಕೆದಾರ ‘@GirishK1605’ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 509 (ಮಹಿಳೆಯ ಘನತೆಗೆ ದಕ್ಕೆ ಉಂಟುಮಾಡುವ ಮಾತು, ಸನ್ನೆ), ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 

 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !