ಮರ್ಮಾಂಗಕ್ಕೆ ಒದ್ದು ವ್ಯವಸ್ಥಾಪಕನನ್ನೇ ಕೊಂದಿದ್ದ !

ಶುಕ್ರವಾರ, ಏಪ್ರಿಲ್ 26, 2019
24 °C

ಮರ್ಮಾಂಗಕ್ಕೆ ಒದ್ದು ವ್ಯವಸ್ಥಾಪಕನನ್ನೇ ಕೊಂದಿದ್ದ !

Published:
Updated:
Prajavani

ಬೆಂಗಳೂರು: ತಾನು ಕೆಲಸಕ್ಕಿದ್ದ ಅಂಗಡಿಯ ವ್ಯವಸ್ಥಾಪಕನನ್ನೇ ಮರ್ಮಾಂಗಕ್ಕೆ ಒದ್ದು ಬಿಯರ್ ಬಾಟಲಿಯಿಂದ ತಲೆಗೆ
ಹೊಡೆದು ಕೊಂದಿದ್ದ ಆರೋಪಿ ಮನೋಹರ್ ಪ್ರೇಮ್‌ಚಂದ್ ವರ್ಮಾ (33) ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು  ಬಂಧಿಸಿದ್ದಾರೆ.

'ಉತ್ತರ ಪ್ರದೇಶದ ಮನೋಹರ್, ಲಗ್ಗೆರೆ ನಿವಾಸಿ ರಮೇಶ್ ಎಂಬುವರನ್ನು ಜ. 15ರಂದು ಕೊಲೆ ಮಾಡಿ ಪರಾರಿಯಾಗಿದ್ದ. ತನ್ನ ರಾಜ್ಯದಲ್ಲೇ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆತನನ್ನು ಹುಡುಕಿಕೊಂಡು ಹೋಗಿದ್ದ ಪೊಲೀಸರಿಗೆ ಸಿಕ್ಕಿಬಿದ್ದ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪಾರ್ಟಿಯಲ್ಲಿ ಹತ್ಯೆ: ‘ಲಗ್ಗೆರೆಯ ಲೋಕೇಶ್ ಎಂಬುವರು ಶೃಂಗಾರ್ ಒಳಾಂಗಣ ವಿನ್ಯಾಸ ಅಂಗಡಿ ನಡೆಸುತ್ತಿದ್ದರು. ಆ ಅಂಗಡಿಯಲ್ಲಿ ವ್ಯವಸ್ಥಾಪಕರಾಗಿದ್ದ ರಮೇಶ್, ಕುಟುಂಬದ ಜೊತೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪೇಟಿಂಗ್ ಕೆಲಸಕ್ಕಿದ್ದ ಗೌತಮ್, ಕೃಷ್ಣ, ರಾಮು ಹಾಗೂ ಆರೋಪಿ ಮನೋಹರ್, ಕೆಂಪೇಗೌಡ ಬಡಾವಣೆಯಲ್ಲಿ ಶೆಡ್‌ನಲ್ಲಿ ವಾಸವಿದ್ದರು’ ಎಂದು ಅಧಿಕಾರಿ ಹೇಳಿದರು.

‘ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೂರು ದಿನ ರಜೆ ಇತ್ತು. ಜ. 15ರಂದು ತಡರಾತ್ರಿ ಕೆಲಸಗಾರರು, ರಮೇಶ್ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು. ರಮೇಶ್ ಮತ್ತು ಆರೋಪಿ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಆರೋಪಿ, ವ್ಯವಸ್ಥಾಪಕನ ಮರ್ಮಾಂಗಕ್ಕೆ ಒದ್ದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಕೊಂದಿದ್ದ’ ಎಂದು ತಿಳಿಸಿದರು.

‘ಶವವನ್ನು ಮನೆಯೊಳಗೇ ಬಿಟ್ಟು ಬೀಗ ಹಾಕಿಕೊಂಡು ಆರೋಪಿ ಪರಾರಿಯಾಗಿದ್ದ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೊಳೆತ ಸ್ಥಿತಿಯಲ್ಲಿ ಶವ ಕಂಡ ಅಂಗಡಿಯ ಮಾಲೀಕ ಠಾಣೆಗೆ ದೂರು ನೀಡಿದ್ದರು’ ಎಂದು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !