ಹೂವಿನ ದರ ಕುಸಿಯುವ ನಿರೀಕ್ಷೆ

7
ಮಾರುಕಟ್ಟೆಗೆ ಬಾರದ ಅಲಸಂದೆ; ಮಾಂಸ ಧಾರಣೆ ಯಥಾಸ್ಥಿತಿ

ಹೂವಿನ ದರ ಕುಸಿಯುವ ನಿರೀಕ್ಷೆ

Published:
Updated:

ಚಾಮರಾಜನಗರ: ಕಾರ್ತಿಕ ಮಾಸ ಕೊನೆಯಾಗುತ್ತಿದ್ದಂತೆಯೇ ಹೂವುಗಳ ಬೇಡಿಕೆಗೆ ಕುಸಿಯಲು ಆರಂಭಿಸಿದೆ. ಸೋಮವಾರ ಕಾರ್ತೀಕ ಮಾಸದ ಕಡೆಯ ಸೋಮವಾರ ಆಗಿದ್ದರಿಂದ ಹೂವುಗಳಿಗೆ ಕೊಂಚ ಬೇಡಿಕೆ ಇತ್ತು. ಮುಂದಿನ ಎರಡು ದಿನಗಳಲ್ಲಿ ಬೇಡಿಕೆ ಕಡಿಮೆ ಆಗಲಿರುವುದರಿಂದ ದರ ಕುಸಿಯಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಉಳಿದಂತೆ ಹಣ್ಣು, ತರಕಾರಿ, ಮಾಂಸಕ್ಕೆ ಧಾರಣೆ ಯಥಾಸ್ಥಿತಿ ಮುಂದುವರಿದಿದೆ. ಕಳೆದ ಐದು ವಾರಗಳಲ್ಲಿ ಜಾತ್ರೆ, ಶುಭ ಸಮಾರಂಭಗಳು ನಡೆದಿದ್ದವು. ಹೀಗಾಗಿ ತರಕಾರಿ, ಹಣ್ಣುಗಳಿಗೂ ಬೇಡಿಕೆ ಇತ್ತು. ಈಗ ಖರೀದಿ ಕುಂಠಿತವಾಗಿದೆ. ಆದರೂ, ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಸಂಕ್ರಾಂತಿಗೆ ಕಾಯಬೇಕು: ಕಾರ್ತಿಕ ಮಾಸದಲ್ಲಿ ಶುಭ ಸಮಾರಂಭಗಳಿಂದಾಗಿ ಹೂವುಗಳಿಗೆ ಬೇಡಿಕೆ ಇತ್ತು. ಇನ್ನೆರಡು ದಿನ ಮಾತ್ರ ಬೇಡಿಕೆ ಇರಲಿದೆ. ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಮಯದಲ್ಲಿ ಮತ್ತೆ ಬೇಡಿಕೆ ಹೆಚ್ಚಲಿದೆ. ಅಲ್ಲಿಯವರೆಗೆ ಕಾಯಬೇಕಾಗಿದೆ ಎಂದು ಹೂವಿನ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಅಲಸಂದೆ ಮಾಯ: ಒಂದು ತಿಂಗಳಿನಿಂದ ತೊಗರಿಕಾಯಿ, ಅವರೆಕಾಯಿಯೊಂದಿಗೆ ಬೇಡಿಕೆಯಲ್ಲಿದ್ದ ಅಲಸಂದೆ (ಕೆ.ಜಿ ಬೆಲೆ ₹30) ಸೋಮವಾರ ಮಾರುಕಟ್ಟೆಯಲ್ಲಿ ಕಂಡು ಬಂದಿಲ್ಲ. ಎಪಿಎಂಸಿಯಲ್ಲಿ ಅಲಸಂದೆ ವಿತರಣೆ ಕಡಿಮೆಯಾಗಿದೆ. 

ದ್ರಾಕ್ಷಿ ಬೆಲೆ ₹20 ಇಳಿಕೆ

ಕಳೆದ ವಾರ ಹಣ್ಣುಗಳ ಮಾರುಕಟ್ಟೆಯಲ್ಲಿ ದ್ರಾಕ್ಷಿ ಬೆಲೆ ಕೆ.ಜಿ.ಗೆ ₹120 ಇತ್ತು. ಈ ವಾರ ₹20 ಕಡಿಮೆಯಾಗಿದೆ. ಹುಳಿ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತಿರುವುದರಿಂದ ‌ಗ್ರಾಹಕರು ಖರೀದಿಸುತ್ತಿಲ್ಲ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸ ಆಗಿಲ್ಲ ಎಂದು ಹಣ್ಣುಗಳ ವ್ಯಾಪಾರಿ ಮಧು ತಿಳಿಸಿದರು.

ಮಾಂಸ ಹಾಗೂ ಮೊಟ್ಟೆ ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ. ಮಟನ್‌, ಕೋಳಿ ಮಾಂಸ, ಮೀನುಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !