ಹೂವಿನ ಧಾರಣೆ ಇಳಿಮುಖ

ಶುಕ್ರವಾರ, ಏಪ್ರಿಲ್ 26, 2019
35 °C
ಮೊಟ್ಟೆ, ಕೆಲ ತರಕಾರಿ ದರ ಏರಿಕೆ. ಮಾಂಸ ಯಥಾಸ್ಥಿತಿ ಮುಂದುವರಿಕೆ

ಹೂವಿನ ಧಾರಣೆ ಇಳಿಮುಖ

Published:
Updated:
Prajavani

ಚಾಮರಾಜನಗರ: ಯುಗಾದಿ ಸಂದರ್ಭದಲ್ಲಿ ದುಬಾರಿಯಾಗಿದ್ದ ಹೂವಿನ ಧಾರಣೆ ಈ ಇಳಿಮುಖವಾಗಿದೆ. ತರಕಾರಿಗಳ ಪೈಕಿ ಟೊಮೆಟೊ ಬೆಲೆ ₹15–₹20ರಷ್ಟು ಹೆಚ್ಚಿದೆ. 

ಚೆಂಡು ಹೂ ಬೇಡಿಕೆ: ಈ ಮಧ್ಯೆ ಬೇಸಿಗೆಯಲ್ಲಿ ಚೆಂಡು ಹೂವಿನ ಉತ್ಪಾದನೆ ಕಡಿಮೆಯಾಗಲಿದೆ. ಇದರಿಂದ ಹೂವಿನ ಮಾರುಕಟ್ಟೆಯಲ್ಲಿ ಚೆಂಡು ಹೂವಿಗೆ ಬೇಡಿಕೆ ಹೆಚ್ಚಲಿದೆ. ಪ್ರಸ್ತುತ ₹ 50ರಿಂದ ₹ 60 ಬೆಲೆ ಇದೆ. ಕೆಜಿ ಮಲ್ಲಿಗೆಗೆ ₹160–₹ 200, ಕನಕಾಂಬರಕ್ಕೆ ₹200ರಿಂದ ₹300ರವರೆಗೆ ಬೆಲೆ ಇದೆ. 

ಅಕ್ಷಯ ತೃತೀಯವರೆಗೂ ಕಾಯಬೇಕು: ಜಾತ್ರೆ, ಶುಭ ಸಮಾರಂಭಗಳು ಯುಗಾದಿಯ ದಿನಕ್ಕೆ ಮುಕ್ತಾಯವಾಗಿವೆ. ಹಾಗಾಗಿ ಹೂವಿಗೆ ಹೆಚ್ಚಿನ ಬೇಡಿಕೆ ಇಲ್ಲ. ಮುಂದಿನ ಒಂದು ತಿಂಗಳ ಕಾಲ ಹೂವಿನ ದರ ಇದೇ ರೀತಿಯಲ್ಲಿರಲಿವೆ ಎಂದು ಹೇಳುತ್ತಾರೆ ವ್ಯಾಪಾರಿಗಳು. 

‘ಮುಂದಿನ ತಿಂಗಳು (ಮೇ) ಅಕ್ಷಯ ತೃತೀಯದವರೆಗೂ ಹೂವುಗಳ ಧಾರಣೆ ಇಳಿಮುಖವಾಗಿರಲಿದೆ. ಆ ಬಳಿಕ ಕೊಂಚ ಹೆಚ್ಚಲಿದೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ ಮಾರುಕಟ್ಟೆಯಲ್ಲಿ ಹಸಿ ಮೆಣಸಿನ ಕಾಯಿ ₹ 10 ಹೆಚ್ಚಳವಾದರೆ, ದಪ್ಪ ಮೆಣಸನ ಕಾಯಿ ₹ 10 ಕಡಿಮೆಯಾಗಿದೆ. ಉಳಿದ ತರಕಾರಿಗಳ ಬೆಲೆ ವ್ಯತ್ಯಾಸವಾಗಿಲ್ಲ. ಎಲ್ಲ ಬಗೆಯ ಸೊಪ್ಪುಗಳ ಬೆಲೆ (ಕಟ್ಟು) ₹5ರಿಂದ ₹10ರ ವರೆಗೆ ಇದೆ.

ಬೇಡಿಕೆ ಇದ್ದರೂ ಬೆಲೆ ಹೆಚ್ಚಳವಾಗಿಲ್ಲ: ಬೇಸಿಗೆಯಲ್ಲಿ ಹಣ್ಣಿನ ರಸ ಹಾಗೂ ಹಣ್ಣುಗಳಿಗೆ ಬೇಡಿಕೆ ಇದೆ. ಆದರೆ, ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಸೇಬಿನ ಹಣ್ಣಿಗೆ ಮಾತ್ರ ಹಾಪ್‌ಕಾಮ್ಸ್‌ನಲ್ಲಿ ₹20 ಹೆಚ್ಚಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಹೋದ ವಾರ ಕೆಜಿ ಸೇಬಿಗೆ ₹80–₹120 ಇತ್ತು. ಈ ವಾರ ₹140 ಆಗಿದೆ. ಹೊರಗಿನ ಮಾರುಕಟ್ಟೆಯಲ್ಲಿ ₹150ವರೆಗೂ ದರ ಇದೆ.

ಟೊಮೆಟೊ, ಮೊಟ್ಟೆ ಧಾರಣೆ ಹೆಚ್ಚಳ

ಮಾರುಕಟ್ಟೆಯಲ್ಲಿ ಟೊಮೆಟೊ ಹಾಗೂ ಮೊಟ್ಟೆ ದರ ಕೊಂಚ ಏರಿಕೆಯಾಗಿದೆ.

‘ಟೊಮೆಟೊ ಇಳುವರಿ, ಉತ್ಪಾದನೆ ಕಡಿಮೆಯಾಗುತ್ತಿರುವ ಪರಿಣಾಮ ಬೆಲೆ ಹೆಚ್ಚಳವಾಗಿದೆ. ಎಪಿಎಂಸಿಯಲ್ಲಿ ಟೊಮೆಟೊ ಕಡಿಮೆ ಪ್ರಮಾಣದಲ್ಲಿ ಆವಕವಾಗುತ್ತಿದೆ. ಹೀಗಾಗಿ, ಬೆಲೆ ಹೆಚ್ಚಳವಾಗಿದೆ’ ಎಂದು ಹಾಪ್‌ಕಾಮ್ಸ್‌ ಮಾರಾಟಗಾರ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಟ್ಟೆಯ ಬೆಲೆ (100ಕ್ಕೆ) ₹20ಕ್ಕೆ ಹೆಚ್ಚಳವಾಗಿದೆ. ಕಳೆದ ವಾರ ₹335 ಇತ್ತು. ಈ ವಾರ ₹355 ಇದೆ.

‘ಪ್ರತಿ ಮೂರು ದಿನಗಳಿಗೊಮ್ಮೆ ಮೊಟ್ಟೆ ಧಾರಣೆ ಬದಲಾಗುತ್ತದೆ. ಸೋಮವಾರ ₹ 355 ಇದೆ. ಕಳೆದ ವಾರಕ್ಕಿಂತ ₹ 20 ಹೆಚ್ಚಳವಾಗಿದೆ. ಮುಂದಿನ ದಿನಗಳಲ್ಲಿ ದರದಲ್ಲಿ ವ್ಯತ್ಯಾಸವಾಗಲಿದೆ. ಇದೇ ದರ ಸ್ಥಿರವಾಗಿರುವುದಿಲ್ಲ’ ಎಂದು ಮೊಟ್ಟೆ ವ್ಯಾಪಾರಿ ನವೀನ್‌ ಹೇಳುತ್ತಾರೆ. 

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಹಾಗೂ ಮೀನುಗಳ ಧಾರಣೆ ಯಥಾಸ್ಥಿತಿ ಮುಂದುವರಿದಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !