ತರಕಾರಿ, ಹೂವು ಧಾರಣೆ ಏರಿಳಿತ

ಗುರುವಾರ , ಜೂನ್ 20, 2019
24 °C
ಕಿತ್ತಳೆ, ಮೂಸಂಬಿ ತುಟ್ಟಿ, ಹಸಿಮೆಣಸಿನ ಕಾಯಿ ಇಳಿಕೆ, ಮಾಂಸ ಬೆಲೆ ಯಥಾಸ್ಥಿತಿ

ತರಕಾರಿ, ಹೂವು ಧಾರಣೆ ಏರಿಳಿತ

Published:
Updated:
Prajavani

ಚಾಮರಾಜನಗರ: ಮಾರುಕಟ್ಟೆಯಲ್ಲಿ ಈ ವಾರ ತರಕಾರಿ ಹಾಗೂ ಹೂವುಗಳ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಹಣ್ಣುಗಳ ಪೈಕಿ ಕಿತ್ತಳೆ ಮತ್ತು ಮೂಸಂಬಿ ಸ್ವಲ್ಪ ತುಟ್ಟಿಯಾಗಿದೆ.

ಹೂವುಗಳ ಪೈಕಿ ಚೆಂಡು ಹೂವು, ಕನಕಾಂಬರದ ಧಾರಣೆ ಇಳಿದಿದೆ. ಕಳೆದ ವಾರ ಕೆಜಿಗೆ ₹ 60 ಇದ್ದ ಚೆಂಡು ಹೂವು ಈ ವಾರ ₹ 40 ಆಗಿದೆ. ₹ 600 ಮಾರಾಟವಾಗುತ್ತಿದ್ದ ಕನಕಾಂಬರದ ಬೆಲೆ ₹ 400ಕ್ಕೆ ಇಳಿದಿದೆ. ಮೊಳ್ಳೆ ಹೂವಿನ ಬೆಲೆ ₹ 50 ಕುಸಿತ ಕಂಡಿದೆ.

ಶುಭಕಾರ್ಯ ಕಡಿಮೆ: ‘ಕಳೆದ ವಾರ ಶುಭ ಸಮಾರಂಭಗಳು, ಮದುವೆ ಕಾರ್ಯಕ್ರಮಗಳು ಹೆಚ್ಚು ನಡೆಯುತ್ತಿದ್ದವು. ಈಗ ದೇವಸ್ಥಾನಗಳಲ್ಲಿ ಅಮಾವಾಸ್ಯೆ ಪೂಜೆ ಮಾತ್ರವೇ ನೆರವೇರುತ್ತಿದೆ. ಇದರಿಂದ ಚೆಂಡು ಹೂವು, ಕನಕಾಂಬರಕ್ಕೆ ಬೇಡಿಕೆ ಇಲ್ಲ. ಹೀಗಾಗಿ ಬೆಲೆ ಕಡಿಮೆಯಾಗಿದೆ’ ಎಂದು ಹೂವಿನ ವ್ಯಾಪಾರಿ ಕೃಷ್ಣ ‘ಪ್ರಜಾವಾಣಿ’ಗೆ ಹೇಳಿದರು.

ತರಕಾರಿಗಳ ಪೈಕಿ ಹಾಪ್‌ಕಾಮ್ಸ್‌ನಲ್ಲಿ ಹಸಿಮೆಣಸಿನಕಾಯಿ, ಕ್ಯಾರೆಟ್‌, ಹಸಿ ಬಟಾಣಿ, ಹೀರೆಕಾಯಿ ಬೆಲೆ ಇಳಿಕೆಯಾಗಿದೆ. ಆಲೂಗೆಡ್ಡೆ, ಗೋರಿಕಾಯಿ, ಈರುಳ್ಳಿ ದರ ಹೆಚ್ಚಳವಾಗಿದೆ. ಕಳೆದ ವಾರ ಕೆಜಿಗೆ ₹ 80 ಇದ್ದ ಹಸಿಮೆಣಸಿನಕಾಯಿ ಬೆಲೆ ಸೋಮವಾರ ₹ 50ಕ್ಕೆ ಮಾರಾಟವಾಗುತ್ತಿತ್ತು.

‘ತಳ್ಳುಗಾಡಿಗಳಲ್ಲಿ ಮಾರುವ ತರಕಾರಿಗಳ ಧಾರಣೆಗೂ ಹಾಪ್‌ಕಾಮ್ಸ್‌ನ ಬೆಲೆಗೂ ವ್ಯತ್ಯಾಸವಿದೆ. ಅನೇಕ ತರಕಾರಿಗಳು ನಮ್ಮಲ್ಲಿ ಕಡಿಮೆ ಬೆಲೆಗೆ ಮಾರಾಟವಾದರೆ, ಅಲ್ಲಿ ಸ್ವಲ್ಪ ಜಾಸ್ತಿ ಇರುತ್ತದೆ. ಮಳೆ ಆರಂಭವಾಗಿರುವುದರಿಂದ ತರಕಾರಿ ಬೆಲೆ ಏರಿಳಿತ ಕಂಡು ಬರುತ್ತಿದೆ. ಒಂದು ದಿನದ ಧಾರಣೆ ಮತ್ತೊಂದು ದಿನ ಇರುವುದಿಲ್ಲ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿಗಳು.

ತೆಂಗಿನಕಾಯಿ ಒಂದರ ಬೆಲೆ ಹಾಪ್‌ಕಾಮ್ಸ್‌ನಲ್ಲಿ ಈ ವಾರ ಕಡಿಮೆಯಾಗಿದ್ದು, ಗಾತ್ರಕ್ಕೆ ತಕ್ಕಂತೆ ₹ 12ರಿಂದ ₹ 15ರ ವರೆಗೆ ಇದೆ. ಇತರೆ ಅಂಗಡಿಗಳಲ್ಲಿ ₹ 16ರಿಂದ ₹ 25ರ ವರೆಗೂ ಇದೆ. ನಿಂಬೆಹಣ್ಣು (ಒಂದಕ್ಕೆ) ಬೆಲೆ ₹ 4ರಿಂದ ₹ 8ರ ವರೆಗೂ ಇದೆ. 

ಹಣ್ಣುಗಳು: ಹಣ್ಣುಗಳ ಪೈಕಿ ಕಿತ್ತಳೆ ₹ 30, ಮೂಸಂಬಿ, ದಾಳಿಂಬೆ ₹ 20 ಹೆಚ್ಚಳವಾಗಿದೆ. ಉಳಿದಂತೆ ಯಾವುದೇ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಾಂಸ ಯಥಾಸ್ಥಿತಿ: ಚಿಕನ್‌, ಮಟನ್‌, ಮೀನುಗಳ ಬೆಲೆಯಲ್ಲಿಯೂ ಬದಲಾವಣೆ ಕಂಡು ಬಂದಿಲ್ಲ.

ಮೊಟ್ಟೆ ಬೆಲೆ ಹೆಚ್ಚಳ ನಿರೀಕ್ಷೆ
ಮೊಟ್ಟೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಸೋಮವಾರ 100 ಮೊಟ್ಟೆಗೆ ಮೊಟ್ಟೆ ₹ 355 ಇತ್ತು. ಕಳೆದ ವಾರ ₹ 386 ಇತ್ತು.

‘ಪ್ರತಿ ಮೂರು ದಿನಗಳಿಗೆ ಮೊಟ್ಟೆ ಧಾರಣೆ ಬದಲಾಗುತ್ತದೆ. ಈ ವಾರ ರಂಜಾನ್‌ ಹಬ್ಬ ಇರುವುದರಿಂದ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !