ಫೇಸ್‌ಬುಕ್‌ ಸ್ಥಗಿತ: ಬಳಕೆದಾರರಿಗೆ ಕಸಿವಿಸಿ

ಸೋಮವಾರ, ಮಾರ್ಚ್ 18, 2019
31 °C

ಫೇಸ್‌ಬುಕ್‌ ಸ್ಥಗಿತ: ಬಳಕೆದಾರರಿಗೆ ಕಸಿವಿಸಿ

Published:
Updated:
Prajavani

ಸ್ಯಾನ್‌ ಫ್ರಾನ್ಸಿಸ್ಕೊ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಬುಧವಾರ ಮಧ್ಯಾಹ್ನದಿಂದ ಗುರುವಾರ ಬೆಳಗಿನ ಜಾವದವರೆಗೆ ಕೆಲವು ಗಂಟೆಗಳ ಕಾಲ ಹಲವು ರಾಷ್ಟ್ರಗಳಲ್ಲಿ ಸ್ಥಗಿತಗೊಂಡಿತ್ತು. ಫೇಸ್‌ಬುಕ್‌ಗೆ ಫೋಟೊ, ವಿಡಿಯೊ ಅಪ್‌ಲೋಡ್‌ ಮಾಡಲು ಸಾಧ್ಯವಾಗದೆ ಬಳಕೆದಾರರು ಪರದಾಡಿದರು.

ಇದೇ ಮೊದಲ ಬಾರಿಗೆ ಫೇಸ್‌ಬುಕ್‌ ದೀರ್ಘಕಾಲದವರೆಗೂ ಸಂಪರ್ಕ ಕಳೆದುಕೊಂಡಿತ್ತು.

ಇನ್‌ಸ್ಟಾಗ್ರಾಂನಲ್ಲಿ ಬಳಸುವಾಗಲೂ ಸಮಸ್ಯೆ ಎದುರಾಯಿತು. ಆದರೆ, ಕೆಲವೇ ಗಂಟೆಗಳಲ್ಲಿ ಇನ್‌ಸ್ಟಾಗ್ರಾಂ ಸಮರ್ಪಕವಾಗಿ ಕಾರ್ಯನಿರ್ವಹಿಸತೊಡಗಿತು.

ಡೆಸ್ಕ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲಿಯೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ತೆರೆದುಕೊಳ್ಳಲಿಲ್ಲ. ಕೆಲ ಬಳಕೆದಾರರಿಗೆ ಮೆಸೆಂಜರ್‌ ಮೂಲಕ ಸಂದೇಶ ರವಾನಿಸುವುದೂ ಅಸಾಧ್ಯವಾಯಿತು. ಟ್ವಿಟರ್‌ನಲ್ಲಿ ಫೇಸ್‌ಬುಕ್‌ ಡೌನ್‌ (#FacebookDown) ಮತ್ತು ಇನ್‌ಸ್ಟಾಗ್ರಾಮ್‌ ಡೌನ್‌(#instagramdown) ಹ್ಯಾಷ್‌ಟ್ಯಾಗ್‌ ಹಾಕಿ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದರು.  

’ಶೀಘ್ರದಲ್ಲಿಯೇ ಹಿಂದಿರುಗಲಿದ್ದೇವೆ’ ಎಂಬ ಒಕ್ಕಣೆಯನ್ನು ಫೇಸ್‌ಬುಕ್‌ ತೋರಿಸಿತು. ’ನಿರ್ವಹಣಾ ಕಾರ್ಯಗಳಿಗಾಗಿ ಫೇಸ್‌ಬುಕ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ’ ಎಂಬ ಪ್ರಕಟಣೆ ನೀಡಿತು. ಆದರೆ, ’ಇದು ಸಂಪರ್ಕ ಸೇವೆ ಸ್ಥಗಿತಗೊಳಿಸಲು ನಡೆದಿರುವ ದಾಳಿ(DDoS)ಗೆ ಸಂಬಂಧಿಸಿದಲ್ಲ’ ಎಂದು ಅದು ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

  • 1

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !