ಅಮೆರಿಕದಾದ್ಯಂತ ಭಾರಿ ಪ್ರತಿಭಟನೆ

7
ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊಸ ವಲಸೆ ನೀತಿಗೆ ವ್ಯಾಪಕ ಆಕ್ರೋಶ

ಅಮೆರಿಕದಾದ್ಯಂತ ಭಾರಿ ಪ್ರತಿಭಟನೆ

Published:
Updated:
ಡೊನಾಲ್ಡ್‌ ಟ್ರಂಪ್‌ ಅವರ ಹೊಸ ವಲಸೆ ನೀತಿ ಖಂಡಿಸಿ ‘ಕುಟುಂಬಗಳನ್ನು ಒಂದುಗೂಡಿಸಿ’ ಘೋಷವಾಕ್ಯದಡಿ ನ್ಯೂಯಾರ್ಕ್‌ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು  –ಪಿಟಿಐ ಚಿತ್ರ

ವಾಷಿಂಗ್ಟನ್‌: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿವಾದಾತ್ಮಕ ವಲಸೆ ನೀತಿ ಖಂಡಿಸಿ ಅಮೆರಿಕದ ವಿವಿಧ ನಗರಗಳಲ್ಲಿ ಭಾರತ ಮೂಲದವರೂ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದರು.

ಹೊಸ ವಲಸೆ ನೀತಿ ಅನ್ವಯ, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸುವವರನ್ನು ಬಂಧಿಸಿ ಕ್ರಿಮಿನಲ್‌ ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದರಿಂದ ವಯಸ್ಕರು ಜೈಲು ಪಾಲಾದರೆ, ಅವರ ಮಕ್ಕಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಇದುವರೆಗೆ ಒಟ್ಟು 2,300ಕ್ಕೂ ಹೆಚ್ಚು ಮಕ್ಕಳನ್ನು ಹೀಗೆ ಪೋಷಕರಿಂದ ಬೇರ್ಪಡಿಸಲಾಗಿದೆ.

ಹೊಸ ವಲಸೆ ನೀತಿ ಅಮಾನವೀಯವಾಗಿದ್ದು, ಬೇರೆ ಯಾವುದೇ ಕಾರಣವಿಲ್ಲದಿದ್ದರೂ ಪೋಷಕರು ಮತ್ತು ಮಕ್ಕಳನ್ನು ಬೇರ್ಪಡಿಸಲಾಗುತ್ತಿದೆ ಎಂದು ಡೆಮಾಕ್ರಟಿಕ್‌ ಪಕ್ಷದ ಮುಖಂಡರು ಮತ್ತು ಮಾನವ ಹಕ್ಕು ಸಂಘಟನೆಗಳು ಆರೋಪಿಸಿವೆ.

‘ಗಡಿ ಭದ್ರಗೊಳಿಸುವ ಮೂಲಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ರಿಪಬ್ಲಿಕನ್ನರು ಬಯಸುತ್ತಾರೆ. ಆದರೆ, ಡೆಮಾಕ್ರಟರಿಗೆ ಮುಕ್ತ ಗಡಿ ಮತ್ತು ಅಪರಾಧಗಳ ವಿಷಯದಲ್ಲಿ ದುರ್ಬಲರಾಗಿ ಇರುವುದು ಬೇಕಾಗಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

**

‘ನಮ್ಮ ದೇಶಕ್ಕೆ ಅಕ್ರಮವಾಗಿ ಬರುವವರನ್ನು ತಕ್ಷಣವೇ ವಾಪಸ್‌ ಕಳುಹಿಸಬೇಕು. ಅವರಿಗಾಗಿ ವರ್ಷಗಟ್ಟಲೆ ಕಾನೂನು ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ.

–ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 4

  Angry

Comments:

0 comments

Write the first review for this !