ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ, 160 ವಿಧದ ಅಲಂಕಾರಿಕ ಮೀನುಗಳ ಪ್ರದರ್ಶನ

7
ಮತ್ಸ್ಯ ಮೇಳಕ್ಕೆ ಚಾಲನೆ; ದೇಶದಲ್ಲೇ ಮೊದಲ ಅಕ್ವೇರಿಯಂ

ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ, 160 ವಿಧದ ಅಲಂಕಾರಿಕ ಮೀನುಗಳ ಪ್ರದರ್ಶನ

Published:
Updated:

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ ಇಲ್ಲಿನ ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯ ಮೇಳದಲ್ಲಿ ಸುರಂಗ ಅಕ್ವೇರಿಯಂ (ಟನಲ್‌ ಅಕ್ವೇರಿಯಂ) ಗಮನ ಸೆಳೆಯುತ್ತಿದೆ. ಇದು ದೇಶದ ಮೊದಲ ಸಂಚಾರಿ ಸುರಂಗ ಅಕ್ವೇರಿಯಂ ಎಂದು ತಯಾರಕರು ಹೇಳುತ್ತಿದ್ದಾರೆ.

18 ಸಾವಿರ ಲೀಟರ್‌ ನೀರಿನ ಸಾಮರ್ಥ್ಯ ಹೊಂದಿದ್ದು, ವಿವಿಧ ತಳಿಯ ಅಲಂಕಾರಿಕ ಮೀನುಗಳನ್ನು ಇದರೊಳಗೆ ಬಿಡಲಾಗಿದೆ. ಮತ್ಸ್ಯ ಮೇಳದ ಪ್ರವೇಶ ದ್ವಾರದ ಬಳಿಯೇ ಈ ಅಕ್ವೇರಿಯಂ ಅನ್ನು ಇಡಲಾಗಿದೆ. ಒಳ ಪ್ರವೇಶಿಸುವ ಜನರಿಗೆ ಇದು ವಿಶಿಷ್ಟ ಅನುಭವ ನೀಡುತ್ತಿದೆ.

‘ವಿದೇಶಗಳಲ್ಲಿ ನಿರ್ದಿಷ್ಟ ಜಾಗದಲ್ಲಿ ಇಡುವಂತಹ ಟನಲ್‌ ಅಕ್ವೇರಿಯಂಗಳು ಇವೆ. ಆದರೆ, ಸಂಚಾರಿ ಟನಲ್‌ ಅಕ್ವೇರಿಯಂಗಳು ಕಡಿಮೆ. ಭಾರತದಲ್ಲಿ ಎಲ್ಲೂ ಸಿಗುವುದಿಲ್ಲ. 15 ವರ್ಷಗಳ ನಿರಂತರ ಸಂಶೋಧನೆ ಬಳಿಕ ಇದನ್ನು ರೂಪಿಸಲಾಗಿದೆ. ಇದನ್ನು ಕೇವಲ 20 ದಿನಗಳಲ್ಲಿ ತಯಾರಿಸಿದ್ದೇವೆ’ ಎಂದು ಮರ್‌ಮೇಡ್‌ ಅಕ್ವೇರಿಯಂ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಸಮೀರ್‌ ಅಹಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾನ್ಯ ಟನಲ್‌ ಅಕ್ವೇರಿಯಂಗಳಿಗೆ ಆಕ್ರಲಿಕ್‌ ಶೀಟ್‌ ಬಳಸುವುದರಿಂದ ಅವುಗಳನ್ನು ಬೇರೆಡೆ ಕೊಂಡೊಯ್ಯಲು ಆಗುವುದಿಲ್ಲ. ಆದರೆ, ಇದನ್ನು ಲ್ಯಾಮಿನೇಟೆಡ್‌ ಸೇಫ್ಟಿ ಗಾಜು ಬಳಸಿ ತಯಾರಿಸಲಾಗಿದೆ. ಇದಕ್ಕೆ 18 ಸಾವಿರ ಲೀಟರ್‌ ನೀರನ್ನು ತಡೆಯುವ ಸಾಮರ್ಥ್ಯ ಇದೆ. ಒಂದೆಡೆಯಿಂದ ಮತ್ತೊಂದೆಡೆ ಸುಲಭವಾಗಿ ಸಾಗಿಸಬಹುದು’ ಎಂದು ವಿವರಿಸಿದರು.

ಜಾಯಿಂಟ್‌ ಗೊರಾಮಿ, ಹಾವಿನ ಹೆಡೆ ಮೀನು, ಹೈಪಿನ್‌ ಶಾರ್ಕ್‌, ವಾಸ್ತು ಮೀನು, ಬ್ಲ್ಯಾಕ್‌ ಡೈಮಂಡ್‌ ಸ್ಟಿಂಗ್‌ ರೇ, ಆರೋವನ, ಪ್ಯಾರೆಟ್‌ ಫಿಶ್‌ಗಳನ್ನು ಈ ಅಕ್ವೇರಿಯಂಗೆ ಬಿಡಲಾಗಿದೆ.

ಉಳಿದಂತೆ, ಸಣ್ಣ ಗಾತ್ರದ ಅಕ್ವೇರಿಯಂಗಳಲ್ಲಿ ಒಟ್ಟು 160 ವಿಧದ ಅಲಂಕಾರಿಕ ಮೀನುಗಳನ್ನು ಕಣ್ತುಂಬಿಕೊಳ್ಳಬಹುದು. ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಮತ್ಸ್ಯ ಮೇಳಕ್ಕೆ ಚಾಲನೆ ನೀಡಿದರು. ಇದು ಸೆಪ್ಟೆಂಬರ್‌ 16ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !